ಮನೋರಂಜನೆ

ಮೆಕಲಂರಿಂದ ಧೋನಿ ಕ್ರೀಡಾ ಮನೋಭಾವ ಕಲಿಯಲಿ: ಹಾರ್ಪರ್

Pinterest LinkedIn Tumblr

brendon-mccullum

ಮೆಲ್ಬರ್ನ್: ಅಂಪೈರ್ ಗಳು ತಮ್ಮ ಕಿವಿಯಲ್ಲಿ ಶ್ರವಣ ಸಾಧನ ಬಳಸಿದ್ದರ ಬಗ್ಗೆ ಹಾಸ್ಯ ಮಾಡಿದ್ದ ಟೀಂ ಇಂಡಿಯಾ ನಾಯಕ ಧೋನಿ ವಿರುದ್ಧ ಆಸ್ಟ್ರೇಲಿಯಾದ ಮಾಜಿ ಅಂಪೈರ್ ಡರೈಲ್ ಹಾರ್ಪರ್ ಕಿಡಿಕಾರಿದ್ದು, ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಂರಿಂದ ಧೋನಿ ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ಹೇಳಿದ್ದಾರೆ.

ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಮೈದಾನದ ಅಂಪೈರ್ ಗಳು ಶ್ರವಣ ಸಾಧನ ಬಳಸಿದ್ದರು. ಬದಲಾದ ತಂತ್ರಜ್ಞಾನಗಳಿಗೆ ತಕ್ಕಂತೆ ಕ್ರಿಕೆಟ್ ನಲ್ಲಿ ಅಂಪೈರ್ ಗಳೂ ಬದಲಾಗಿದ್ದಾರೆ. ಅದನ್ನು ಲಘವಾಗಿ ಇಲ್ಲವೇ ಕುಚೋದ್ಯವಾಗಿ ಪರಿಗಣಿಸಬಾರದು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಗಳಿಂದ ಕೆಲವಾರು ತಪ್ಪು ನಿರ್ಣಯಗಳು ಬಂದಿದ್ದಕ್ಕೆ ಅಂಪೈರ್ ಗಳು ಧರಿಸಿದ ಶ್ರವಣ ಸಾಧನಗಳೇ ಕಾರಣ ಎಂದಿರುವ ಧೋನಿ, ಡಿಆರ್ಎಸ್ ತಂತ್ರಜ್ಞಾನವನ್ನು ವಿರೋಧಿಸುತ್ತಾರೆ.

ಅಂಪೈರ್ ಪುನರ್ ಪರಿಶೀಲನಾ ತೀರ್ಪು(ಡಿಆರ್ ಎಸ್)ನಲ್ಲಿ ಕೆಲವೊಮ್ಮೆ ಅಂಪೈರ್ ಗಳಿಂದ ಕೆಟ್ಟ ತೀರ್ಪುಗಳು ಬಂದರೂ ಅವುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ತಂಡಗಳ ನಾಯಕರಿಗೆ ಅವಕಾಶವಿರುತ್ತದೆ. ಆದರೆ ಇಂಥ ಅವಕಾಶ ಬೇಡವೆನ್ನುವ ಧೋನಿ, ತಪ್ಪುಗಳಾದಾಗ ಮಾತ್ರ ಟೀಕೆಗಳಿಯುವುದು ಸರಿಯಲ್ಲ ಎಂದಿದ್ದಾರೆ.

Write A Comment