ನಾನು ಹಾಕಿಕೊಂಡಿರೋ ಡ್ರೆಸ್ಸು ಚೆನ್ನಾಗಿಲ್ಲ ಅನ್ನಿಸಿದ್ರೆ ನಂಗೆ ಬೇಜಾರಾಗುತ್ತದೆ. ಆದಷ್ಟು ಬೇಗ ಮನೆಗೆ ಹೋಗಿ ಸೇರಿಕೊಳ್ಳೋಣ ಅನ್ನಿಸುತ್ತದೆ. ಅದೇ ನಾನು ಚೆನ್ನಾಗಿದ್ದೇನೆ ಅಂತ ಮನಸ್ಸಿಗೆ ಬಂದು ನನಗೆ ನಾನು ಗುಡ್ ಅನ್ನಿಸಿದ್ರೆ ಸಾಕು. ಖುಷಿಯಾಗಿರುತ್ತೇನೆ ಆಗ ಎಲ್ಲರಿಗೂ ನಾನು ಗುಡ್ ಅನ್ನಿಸ್ತೇನೆ. ಜಗತ್ತೆಲ್ಲಾ ನನಗೆ ಗುಡ್ ಅನ್ನಿಸ್ತದೆ. ಹಾಗಾಗಿ ನನಗೆ ನಾನು ಗುಡ್ ಗುಡ್ ಅಂತಂದುಕೊಳ್ಳುತ್ತಿರುತ್ತೇನೆ.
– ಹೀಗಂತ ಕಾಲೇಜು ಹುಡ್ಗಿಯೊಬ್ಬಳು ಹೇಳಿದಳು. ಇಂಟರೆಸ್ಟಿಂಗ್ ಅಂತನ್ನಿಸಿ ಯಾರು ಯಾವಾಗ ಹ್ಯಾಪ್ಪಿಯಾಗಿರುತ್ತಾರೆ ಎಂದು ಹುಡುಕಿದಾಗ ಒಂದಷ್ಟು ಇಂಟರೆಸ್ಟಿಂಗ್ ಆನ್ಸರ್‌ಗಳು ಸಿಕ್ಕವು. ಹ್ಯಾಪ್ಪಿಯಾಗಲು ನೀವೂ ಈ ಹ್ಯಾಪ್ಪಿ ಸೂತ್ರಗಳನ್ನು ಬಳಸಿಕೊಳ್ಳಬಹುದು.
ಯೋಚನೆ ಮಾಡಿ ಮಾತಾಡುವುದಕ್ಕಿಂತ ಮನಸ್ಸಿನ ಮಾತು ಹೇಳುವುದು ಒಳ್ಳೆಯದು. ಮನಸ್ಸಿನಿಂದ ಬಂದಿದ್ದು ಪ್ರಾಮಾಣಿಕ ಮಾತಾಗಿರುತ್ತದೆ. ಪ್ರಾಮಾಣಿಕವಾಗಿ ಮಾತಾಡಿದಾಗಲೆಲ್ಲಾ ನಾನು ಹ್ಯಾಪ್ಪಿಯಾಗಿರುತ್ತೇನೆ. ತುಂಬಾ ಮುಖ್ಯವಾದ ವಿಷಯವೆಂದರೆ ನಿಮ್ಮ ಸುತ್ತಲೂ ಒಳ್ಳೆ ವ್ಯಕ್ತಿಗಳೇ ಇರುವಂತೆ ನೋಡಿಕೊಳ್ಳುವುದು. ಅವರು ನಿಮ್ಮನ್ನು ಕೇರ್ ಮಾಡುತ್ತಿರಬೇಕು. ನಿಮ್ಮನ್ನು ಅರ್ಥ ಮಾಡಿಕೊಳ್ಳುವಂತಿರಬೇಕು. ಅವರ ಜೊತೆ ಏನು ಹೇಳಿದರೂ ಅದರಿಂದ ತೊಂದರೆಯಾಗದಂತಿರಬೇಕು. ಆಗ ಹ್ಯಾಪ್ಪಿಯಾಗಿರಬಹುದು.
– ಸಾನಿಯಾ ಮಿರ್ಜಾ
ಸೋಲಲಿ ಗೆಲ್ಲಲಿ ಬೀಳಲಿ ಏಳಲಿ ಆಗೋದೆಲ್ಲಾ ಒಳ್ಳೇದಕ್ಕೆ ಅನ್ನುತ್ತಿರುತ್ತೇನೆ. ತ್ರೀ ಈಡಿಯೆಟ್ಸ್ ಸಿನಿಮಾದಲ್ಲಿ ಹೀರೋ ಆಲ್ ಇಸ್ ವೆಲ್ ಅಂದಂತೆ. ಹೀಗೆ ಹೇಳಿದರೆ ಪಾಸಿಟಿವ್ ಅನ್ನಿಸುತ್ತದೆ. ಮನಸ್ಸು ಹಗುರವಾಗುತ್ತದೆ. ಯಾವುದೂ ದೊಡ್ಡ ವಿಷಯ ಅನ್ನಿಸುವುದಿಲ್ಲ. ನೆಮ್ಮದಿ ಸಿಗುತ್ತದೆ.
– ಗಗನ್
ನಾನು ಈಸಿ ಗೋಯಿಂಗ್ ಗರ್ಲ್. ಎಕ್ಸರ್‌ಸೈಜ್ ಮಾಡಿ ಫಿಟ್‌ನೆಸ್ ಮೆಂಟೇನ್ ಮಾಡಿಕೊಂಡರೆ ಹ್ಯಾಪ್ಪಿಯಾಗಿರುತ್ತೇನೆ. ನನ್ನ ಜೀವನದ ಗೋಲ್ ಅದೇ. ಹ್ಯಾಪ್ಪಿಯಾಗಿರುವುದು ಮತ್ತು ನನ್ನ ಸುತ್ತ ಇರುವವರು ಹ್ಯಾಪ್ಪಿಯಾಗಿರುವಂತೆ ನೋಡಿಕೊಳ್ಳುವುದು.
– ಬಿಪಾಶಾ
ಹ್ಯಾಪ್ಪಿಯಾಗಿರುವ ಒಂದು ಸೂಪರ್ ಟೆಕ್ನಿಕ್ ಎಂದರೆ ನಗುತ್ತಿರುವುದು. ನಗುವಷ್ಟು ಹೊತ್ತು ಯಾವುದೇ ಸಮಸ್ಯೆ ಇರುವುದಿಲ್ಲ. ಬೇಜಾರಾದರೆ ನನ್ನ ಪ್ರೀತಿಯ ನಾಯಿಗಳ ಹತ್ತಿರ ಹೋಗುತ್ತೇನೆ. ತಕ್ಷಣ ಖುಷಿಯಾಗುತ್ತೇನೆ.
– ವೀರ್ ದಾಸ್
ಬೇರೆಯವರ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುವುದಿಲ್ಲ. ಎಷ್ಟು ಬೇಕೋ ಅಷ್ಟು ಕೇಳಿಕೊಂಡು ಉಳಿದದ್ದನ್ನೆಲ್ಲಾ ಬಿಟ್ಟುಬಿಡುತ್ತೇನೆ. ಲೈಫು ಜಿಂಗಾಲಾಲ.
– ನಿಶಾ
ನನ್ನ ಪತ್ನಿ ಮತ್ತು ಮಗುವಿನ ನಗು ಮತ್ತು ಅಪ್ಪುಗೆ ನಾನು ಎಂಥಾ ಒತ್ತಡದಲ್ಲಿದ್ದರೂ ಹ್ಯಾಪ್ಪಿಯಾಗಿರುವಂತೆ ನೋಡಿಕೊಳ್ಳುತ್ತದೆ. ಒಂದು ಸ್ಪರ್ಶ, ಒಂದು ಸಾಂತ್ವನ ಮತ್ತೆ ರಿಚಾರ್ಜ್ ಮಾಡಿ ಕೆಲಸ ಮಾಡುವ ಶಕ್ತಿ ಒದಗಿಸುತ್ತದೆ.
– ರಾಜ್ ಕುಂದ್ರಾ
-ಉದಯವಾಣಿ