
ಮಲೇಶಿಯಾದಲ್ಲಿ ‘ಕಬಾಲಿ’ ಸಿನೆಮಾದ ಉಳಿದ ಚಿತ್ರೀಕರಣವನ್ನು ಮುಗಿಸಿ ಚೆನ್ನೈಗೆ ವಾಪಸ್ ಬಂದಿಳಿದಿರುವ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಲ್ಲಿ ಉತ್ಸಾಹ ಹುಟ್ಟಿಸಿದ್ದರೆ ಅದೇ ಸಮಯದಲ್ಲಿ ಅವರ ಮುಂದಿನ ಸಿನೆಮಾದ ಬಗ್ಗೆ ಕುತೂಹಲಕಾರಿ ವದಂತಿಗಳನ್ನು ಹುಟ್ಟುಹಾಕಿದೆ.
ಈ ವದಂತಿಗಳು ಏನೆಂದರೆ ಕಬಾಲಿ ಚಿತ್ರೀಕರಣದ ಒಟ್ಟೊಟ್ಟಿಗೇ ರಜನಿಕಾಂತ್ ಅವರು ಮಲಯಾಳಂ ಸಿನೆಮಾ ‘ಭಾಸ್ಕರ್ ದ ರಾಸ್ಕಲ್’ ಸಿನೆಮಾದ ರಿಮೇಕ್ ಶಂಕರ್ಸ್ ೨.೦ ಸಿನೆಮಾ ಚಿತ್ರೀಕರಣದಲ್ಲೂ ನಿರತರಾಗಿದ್ದಾರೆ ಎಂಬುದು.
ಸಿದ್ದಿಕಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ರಜನಿ ಹಸಿರು ನಿಶಾನೆ ನೀಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಆದರೆ ರಜನಿಕಾಂತ್ ಅವರ ಹತ್ತಿರದ ಮೂಲಗಳ ಪ್ರಕಾರ ಈ ವರದಿಯಲ್ಲಿ ಹುರುಳಿಲ್ಲವಂತೆ. ರಜನಿ ಈ ಯೋಜನೆಯ ಬಗ್ಗೆ ಯಾವುದೇ ರೀತಿಯ ಒಪ್ಪಿಗೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.