ಮನೋರಂಜನೆ

ಸಿಂಬು-ನಯನತಾರಾ: ಹಳೆ ಪ್ರೇಮಿಗಳ ಹೊಸ ಕೆಮಿಷ್ಟ್ರಿ

Pinterest LinkedIn Tumblr

nayantara-simbu-kissing-photoಕಾಲಿವುಡ್‌ನ ಒಂದು ಕಾಲದ ಪ್ರಣಯ ಪಕ್ಷಿಗಳಾದ ಸಿಂಬು-ನಯನತಾರಾ ರೋಮ್ಯಾನ್ಸ್ ಮಾಡೋ ದಿನಗಳು ಹತ್ತಿರವಾಗ್ತಿವೆ.ಅವರು ಈಗಾಗ್ಲೇ ರೋಮ್ಯಾನ್ಸ್ ಮಾಡಿದ್ದಾರೆ ಅದನ್ನ ನೀವು ರೀಲ್ ಮೇಲೆ ನೋಡೋ ದಿನಗಳು ಹತ್ತಿರವಾಗ್ತಿವೆ.
ಇತ್ತೀಚೆಗೆ ಬೀಪ್ ಸಾಂಗ್ ಎಡವಟ್ಟಿನಿಂದಾಗಿ ತಲೆ ದಂಡ ತಪ್ಪಿಸಿಕೊಳ್ಳೋಕೆ ತಲೆಮರೆಸಿಕೊಂಡಿದ್ದ ಸಿಲಂಬರಸನ್-ನಯನತಾರಾ ಜೋಡಿ ಕಾಲಿವುಡ್‌ನ ಒಂದು ಕಾಲದ ಪ್ರೇಮಪಕ್ಷಿಗಳು. ಆಗ ರಿಯಲ್ಲು ಈಗ ರೀಲು. ‘ಇದು ನಮ್ಮ ಆಳು’ ಸಿನಿಮಾದಲ್ಲಿ ನಯನತಾರಾ ಸಿಂಬು ಜೋಡಿಯಾಗಿದ್ದಾರೆ. ಈಗ ಅದರ ಟ್ರೈಲರ್ ಹೊರಬಂದಿದ್ದು ಮತ್ತೊಮ್ಮೆ ಹಳೆ ಪ್ರೇಮಿಗಳು ಒಂದಾದಾಗ ಆಗೋ ರೋಮಾಂಚನವನ್ನ ಚಿತ್ರಪ್ರೇಮಿಗಳು ಅನುಭವಿಸ್ತಿದ್ದಾರೆ.

ತ್ರಿಕೋನ ಪ್ರೇಮಕಥೆ ಹೊಂದಿರೋ ಚಿತ್ರದಲ್ಲಿ ಸಿಂಬು ನಯನತಾರಾ ರಿಯಲ್ ಲೈಫ್‌ನ್ನೇ ಹೋಲೋ ಡೈಲಾಗ್‌ಗಳಿದ್ದು ಆಂಡ್ರೆ ಜೆರೆಮಿಯ ಮತ್ತೊಂದು ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರಲಿದ್ದು ಪ್ರೇಮಿಗಳ ದಿನಕ್ಕೊಂದು ಭರ್ಜರಿ ಸಿನಿಮಾ ಕಾದಿದೆ.

Write A Comment