ಮುಂಬೈ: 90 ರ ದಶಕದ ಬಾಲಿವುಡ್ ನಟಿ ಪೂಜಾ ಭಟ್ ‘ಎವರಿಬಡಿ ಸೇಯ್ಸ್ ಐ ಎಮ್ ಫೈನ್’ ಎಂಬ ಚಿತ್ರದ ಸುದೀರ್ಘ 15 ವರ್ಷಗಳ ನಂತರ ಮತ್ತೆ ಬೆಳ್ಳಿ ತೆರೆಗೆ ಮರಳಲಿದ್ದಾರೆ.
ಬಾಲಿವುಡ್ನ ಖ್ಯಾತ ನಿರ್ದೇಶಕ ಹಾಗೂ ಕಥೆಗಾರ ಮಹೇಶ್ ಭಟ್ ತಮ್ಮ ಪುತ್ರಿಗಾಗಿ ಕಥೆ ಸಿದ್ದಪಡಿಸಿದ್ದಾರೆ. ಅಭಿನಯದ ಬಗೆಗಿನ ತಮಗಿರುವ ಗೀಳನ್ನು ಗುರುತಿಸಿದ ತಮ್ಮ ತಂದೆ ‘ಮಗಳೇ ನಿನಗಾಗಿ ಒಂದು ಕಥೆ ತಯಾರಿದೆ. ಅಭಿನಯಿಸಲು ಸಿದ್ದಳಾಗು’ ಎಂದು ಹೇಳಿದರಂತೆ.
43 ರ ಹರೆಯದ ಪೂಜಾ ಕಥೆಯಲ್ಲಿ ತಮ್ಮ ವಯಸ್ಸಿಗೆ ತಕ್ಕ ಪಾತ್ರವಿರುವುದು ಹಾಗೂ ತಮ್ಮ ತಂದೆ ಹೆಣೆದಿರುವ ಕಥೆಗೆ ನಾಯಕಿಯಾಗಿ ಅಭಿನಯಿಸಲು ಒಪ್ಪಿದ್ದಾರೆ. ಇನ್ನೂ ಹೆಸರಿಡದ ಚಿತ್ರ ಏಪ್ರಿಲ್ನಲ್ಲಿ ಸೆಟ್ಟೆರುವ ಸಾಧ್ಯತೆಯಿದೆ.