ನವದೆಹಲಿ: ಕಳೆದ ವರ್ಷ ಅಮೆರಿಕ ದೂರದರ್ಶನ ನಡೆಸಿದ ಪೀಪಲ್ಸ್ ಚಾಯ್್ಸ ಪ್ರಶಸ್ತಿಗೆ ಭಾಜನರಾಗಿದ್ದ ಮಾಜಿ ಬಾಲಿವುಡ್ ತಾರೆ ಪ್ರಿಯಾಂಕ ಚೋಪ್ರಾ ಈಗ ಚಿತ್ರ ಜಗತ್ತಿನ ಅತ್ಯುನ್ನತ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿ ವಿತರಣೆ ನಿರೂಪಕಿಯಾಗಿ ಆಯ್ಕೆಯಾಗಿದ್ದಾರೆ.
ಹಾಲಿವುಡ್ ಘಟಾನುಘಟಿಗಳಾದ ಜೇರ್ಡ್ ಲೆಟೊ, ರೀಸೆ ವಿಥೆರ್ಸ್ಪೂನ್, ಆಂಡಿ ರ್ಸಸ್, ಜೂಲಿಯಾನ್ನೆ ಮೂರೆ, ಚಾರ್ಲಿಜ್ ಥೆರಾನ್ ಮತ್ತು ರ್ಯಾನ್ ಗೊಸ್ಲಿಂಗ್ ಮತ್ತಿತರರ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಅಮೆರಿಕ ದೂರದರ್ಶನದಲ್ಲಿ ಮುಖ್ಯಭೂಮಿಕೆಯಲ್ಲಿ ಭಾರತದ ನಟಿಯೊಬ್ಬಳು ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಬೇವಾಚ್ ಎಂಬ ಹಾಲಿವುಡ್ ಧಾರಾವಾಹಿಯಲ್ಲಿ ನಟ ಡ್ವಾನ್ ಜಾನ್ಸನ್ ಜತೆ ನಟಿಸಲು ಅಣಿಯಾಗಿರುವ ಬೆನ್ನಲ್ಲೆ ಆಸ್ಕರ್ ಪ್ರಶಸ್ತಿ ನಿರೂಪಕಿಯಾಗಿ ಆಯ್ಕೆಯಾಗಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಮಹಿಳೆಯೊಬ್ಬಳು ಮಿಂಚುತ್ತಿರುವುದು ವಿಶೇಷ. ಫೆಬ್ರವರಿ 28 ರಂದು ಕ್ಯಾಲಿಫೋರ್ನಿಯಾದ ಡಾಲ್ಬಿ ಸ್ಟುಡಿಯೋದಲ್ಲಿ ಕಾರ್ಯಕ್ರಮ ನಡೆಯಲಿದೆ.