ಇತ್ತೀಚಿನ ರಿಯಾಲಿಟಿ ಷೋಗಳಲ್ಲಿ ಅತ್ಯುತ್ತಮ ಸ್ಥಾನದಲ್ಲಿರುವ ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದಿನದಿಂದ ದಿನಕ್ಕೆ ನೋಡುಗರ ಹೃದಯಕ್ಕೆ ಹತ್ತಿರವಾಗುತ್ತಿದೆ. ಅದೇ ರೀತಿ ಈಬಾರಿ ಕೂಡ ಪ್ರೇಕ್ಷಕರಿಗೆ ಮತ್ತೊಮ್ಮೆ ಕಲಾವಿದರ ದಂಡನ್ನೇ ಕರೆಸಿ ಮನರಂಜನೆ ನೀಡುತ್ತಿದೆ.
ಈ ವಾರಾಂತ್ಯದ ಕಾರ್ಯಕ್ರಮದಲ್ಲಿ ರೆಬೆಲ ಸ್ಟಾರ್ ಅಂಬರೀಷ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಸಿನಿ ಜೀವನದ ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕಲಿದ್ದಾರೆ. ಜೊತೆಗೆ ತಮ್ಮ ಸಿನಿ ಜಗತ್ತಿನ ಏಳು ಬೀಳುಗಳ ಬಗ್ಗೆ, ಕಷ್ಟದಲ್ಲಿ ಕೈ ಹಿಡಿದ ಸ್ನೇಹಿತರ ಬಳಗದ ಬಗ್ಗೆ, ತಮ್ಮ ಸಾಧನೆಯ ಹಿಂದಿರುವ ಅನೇಕ ಮಹನೀಯರ ಬಗ್ಗೆ ಮಾತನಾಡಿದ್ದಾರೆ.
ಮಂಡ್ಯದ ಗಂಡಿನ ಮಾತಿನ ಗತ್ತನ್ನು ಅವರ ಮಾತಿನಲ್ಲೇ ಕೇಳುವ ಅವಕಾಶ, ಅವರೊಳಗೆ ಅಡಗಿರುವ ಮತ್ತೊಬ್ಬ ಅಂಬಿಯನ್ನು ಕಾಣುವಂಥ ಸದಾವಕಾಶ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 9 ಘಂಟೆಗೆ ಜೀ ಕನ್ನಡ ವಾಹಿನಿಯ ವೀಕ್ಷಕರಿಗೆ ದೊರೆಯಲಿದೆ.
ಈ ಅಪರೂಪದ ಕಾರ್ಯಕ್ರಮದಲ್ಲಿ ನಿರ್ದೇಶಕ ಯೋಗರಾಜ್ ಭಟ್, ಜೈ ಜಗದೀಶ್, ತಾರಾ, ಸುಮಲತಾ ಅಂಬರೀಶ್, ರಾಕ್‌ಲೈನ್ ವೆಂಕಟೇಶ್, ಉದ್ಯಮಿ ಅಶೋಕ್ ಖೇಣಿ, ಅಂಬರೀಷ್ ಅವರ ಪುತ್ರ ಅಭಿಷೇಕ್ ಹಾಗೂ ಅನೇಕ ಗಣ್ಯರು ಅಂಬರೀಷ್ ಅವರ ಒಳ್ಳೆಯತನದ ಬಗ್ಗೆ, ತುಂಟತನಗಳ ಬಗ್ಗೆ, ಕಷ್ಟಗಳಿಗೆ ಅವರು ಸ್ಪಂದಿಸುವ ಬಗ್ಗೆ ಮಾತನಾಡಲಿದ್ದಾರೆ.