ಮನೋರಂಜನೆ

ಶಾರುಖ್ , ಅಮೀರ್ ಸೇರಿ ಹಲವು ಸೆಲಬ್ರಿಟಿಗಳ ಸೆಕ್ಯೂರಿಟಿಯೇ ಕಟ್!

Pinterest LinkedIn Tumblr

aamir-khan-shah-rukh-khan_650x400_71452235551ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಶಾರುಖ್ ಖಾನ್, ಅಮೀರ್ ಖಾನ್ ಸೇರಿದಂತೆ ಸುಮಾರು 25 ಮಂದಿ ಬಾಲಿವುಡ್ ನಟ, ನಟಿಯರಿಗೆ ನೀಡಿದ್ದ ಭದ್ರತೆಯನ್ನು ಕಡಿತಗೊಳಿಸುವ ಬಗ್ಗೆ ಮುಂಬೈ ಪೊಲೀಸರು ನಿರ್ಧರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಬೆದರಿಕೆಗೆ ಸಂಬಂಧಿಸಿದಂತೆ ವಾರ್ಷಿಕ ಪರಿಶೀಲನೆಯ ನಂತರ ಸೆಲೆಬ್ರಿಟಿಗಳಿಗೆ ನೀಡಿದ್ದ ಭದ್ರತೆಯನ್ನು ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಂಬೈ ಪೊಲೀಸ್ ಮೂಲಗಳು ಹೇಳಿವೆ. ಬಾಲಿವುಡ್ ನ ಈ ಸೆಲೆಬ್ರಿಟಿಗಳಿಗೆ ಈ ಭದ್ರತೆ ಅಗತ್ಯವಿಲ್ಲ. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಈಗಾಗಲೇ ಭದ್ರತೆ ನೀಡಿರುವ ಬಾಲಿವುಡ್ ಸೆಲೆಬ್ರಿಟಿಗಳ ಭದ್ರತೆ ಬಗ್ಗೆ ಆಡಿಟ್ ನಡೆಸಲಾಗಿತ್ತು. ಅದರಲ್ಲಿ ಭದ್ರತೆಯ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದೆ.

ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಗೆ ನಾವು ರೌಂಡ್ ಕ್ಲಾಕ್ ಭದ್ರತೆ ಒದಗಿಸಲಾಗಿತ್ತು. ಜೊತೆಗೆ ಶಸ್ತ್ರ ಸಜ್ಜಿತ ಇಬ್ಬರು ಕಾನ್ಸ್ ಟೇಬಲ್ಸ್ ಹಾಗೂ ಶಸ್ತ್ರಸಜ್ಜಿತ ಗಾರ್ಡ್ಸ್ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲ ಶಸ್ತ್ರಸಜ್ಜಿತ ಎಸ್ಕಾರ್ಟ್ ವಾಹನ ಕೂಡಾ ಒದಗಿಸಲಾಗಿತ್ತು.

ಆದರೆ ಇದೀಗ ಶಾರುಖ್ ಮತ್ತು ಅಮೀರ್ ಗೆ ಎಸ್ಕಾರ್ಟ್ ಮತ್ತು ಶಸ್ತ್ರಸಜ್ಜಿತ ಗಾರ್ಡ್ಸ್ ಭದ್ರತೆ ಹಿಂಪಡೆಯಲಾಗುವುದು. ಎರಡು ಪಾಳಿಯಲ್ಲಿ ಇಬ್ಬರು ಶಸ್ತ್ರಸಜ್ಜಿತ ಕಾನ್ಸ್ ಟೇಬಲ್ಸ್ ಭದ್ರತೆ ಮಾತ್ರ ನೀಡಲಾಗುವುದು ಎಂದು ವರದಿ ತಿಳಿಸಿದೆ.

ಮುಂಬೈನಲ್ಲಿ ಸುಮಾರು 40 ಬಾಲಿವುಡ್ ಸೆಲೆಬ್ರಿಟಿಗಳಿಗೆ ಭದ್ರತೆ ಒದಗಿಸಲಾಗಿತ್ತು. ಅದರಲ್ಲಿ ನಿಜವಾಗಿಯೂ ಜೀವಬೆದರಿಕೆ ಎದುರಿಸುತ್ತಿರುವ ಸೆಲೆಬ್ರಿಟಿಗಳ ಸಂಖ್ಯೆ 15 ಮಂದಿ ಎಂದು ಪೊಲೀಸ್ ಮೂಲಗಳು ವಿವರಿಸಿದೆ. ಇದರಲ್ಲಿ ಅಕ್ಷಯ್ ಕುಮಾರ್, ಮಹೇಶ್ ಭಟ್, ಮುಖೇಶ್ ಭಟ್, ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಸೇರಿದಂತೆ 15 ಮಂದಿಗೆ ಪೂರ್ಣ ಭದ್ರತೆ ನೀಡಲಾಗುವುದು ಎಂದು ಹೇಳಿದೆ.

ಶಾರುಖ್, ಅಮೀರ್ ಭದ್ರತೆ ಕಡಿತಗೊಳಿಸಿಲ್ಲ: ಮುಂಬೈ ಪೊಲೀಸ್
ಶಾರುಖ್ ಖಾನ್ ಸೇರಿದಂತೆ 40 ಸೆಲೆಬ್ರಿಟಿಗಳು ಭದ್ರತೆ ಕಡಿತಗೊಳಿಲಾಗಿದೆ ಎಂಬ ವರದಿಯನ್ನು ಮುಂಬೈ ಪೊಲೀಸರು ಅಲ್ಲಗಳೆದಿದ್ದು, ಶಾರುಖ್ ಖಾನ್ ಅಮೀರ್ ಖಾನ್ ಭದ್ರತೆಯನ್ನು ಕಡಿತಗೊಳಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೇ ಅಮಿತಾಬ್, ಲತಾ, ದಿಲೀಪ್ ಅವರಿಗೆ ಭದ್ರತೆಯನ್ನು ನೀಡಲಾಗಿದೆ ಎಂದು ಹೇಳಿದೆ.
-ಉದಯವಾಣಿ

Write A Comment