ಮನೋರಂಜನೆ

ಕಿವುಡು, ಮೂಕ ಮಕ್ಕಳ ಮುಖದಲ್ಲಿ ಬೆಳಕು ಮಿನುಗಿಸಿದ ತೆಂಡೂಲ್ಕರ್

Pinterest LinkedIn Tumblr

sachin-webನವದೆಹಲಿ: ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಸಂಗಮ್ನೇರ್ ತಾಲೂಕಿನ ಶಾಲೆಯಲ್ಲಿ ಓದುತ್ತಿರುವ ಕಿವುಡು ಹಾಗೂ ಮೂಕ ವಿದ್ಯಾರ್ಥಿಗಳಿಗೆ ಸೂಕ್ತ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳು ಇರಲಿಲ್ಲ. ಈ ಕುರಿತು ಶಾಲೆಯ ಆಡಳಿತ ಮಂಡಳಿ ಅಧಿಕಾರಿಗಳಿಗೆ ಎಷ್ಟೇ ಪತ್ರ ಬರೆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ.

ಆದರೆ ಮಕ್ಕಳ ಮುಖದಲ್ಲಿ ಹೊಸ ವರ್ಷ ಹೊಸ ಮಂದಹಾಸ ಮೂಡಿಸಿದೆ. ಶಾಲೆಯ ಹೆಸರಿನ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿ ಜಮಾ ಆಗಿದೆ. ಆದರೆ ಈ ಹಣ ಹಾಕಿದವರು ಮಾತ್ರ ಅನಾಮಿಕ. ಎರಡು ದಿನದವರೆಗೂ ಉತ್ತರ ಸಿಗದೆ ಎಲ್ಲರೂ ತಲೆಕೆಡಿಸಿಕೊಂಡಿದ್ದರು. ಈ ರೀತಿಯ ಸಾಮಾಜಿಕ ಕಾಳಜಿ ಮೆರೆದ ವ್ಯಕ್ತಿ ಬೇರಾರು ಅಲ್ಲ. ಅದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. ಸ್ವತಃ ಸಚಿನ್ ಈ ಶಾಲೆಗೆ ಇದೀಗ ಭೇಟಿ ನೀಡುವುದರ ಜತೆಗೆ ಮಕ್ಕಳ ಆರೋಗ್ಯ ಸ್ಥಿತಿಗತಿ ಸುಧಾರಿಸಲು ದೇವೇಂದ್ರ ವೋಹ್ರಾ ಎಂಬ ವೈದ್ಯರನ್ನು ನೇಮಿಸಿದ್ದಾರೆ.

ರಾಜ್ಯಸಭಾ ಸದಸ್ಯರಾಗಿರುವ ಸಚಿನ್ ಅವರಿಗೆ ಸಮಾಜಪರ ಕಾಳಜಿ ಇಲ್ಲ. ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಟೀಕೆಯನ್ನು ಸಚಿನ್ ಸುಳ್ಳು ಮಾಡುವ ಜತೆಗೆ ರಾಜಕಾರಣಿಗಳಿಗೆ ಆದರ್ಶ ಪ್ರಾಯರಾಗಿದ್ದಾರೆ. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ನಿಧಿಯಲ್ಲಿ ಶೇ 98 ರಷ್ಟು ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗಿಸಿದ್ದು ದಾಖಲೆಗಳಿಂದ ತಿಳಿದುಬಂದಿದೆ. ಉತ್ತರಾ ಖಂಡ ಪ್ರವಾಹ, ಜಮ್ಮು- ಕಾಶ್ಮೀರ ಪ್ರವಾಹ, ತಮಿಳುನಾಡು ಪ್ರವಾಹ, ಶಾಲೆ, ಸೇತುವೆ ನಿರ್ಮಾಣದಂತಹ ಜನಪರ ಕೆಲಸಗಳಿಗೆ ಹಣ ವಿನಿಯೋಗಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಆಂಧ್ರಪ್ರದೇಶದ ಪುಟ್ಟಮ್ಾಜು ಕಂಡ್ರಿಗಾ ಗ್ರಾಮವನ್ನು ದತ್ತು ತೆಗೆದು ಕೊಂಡಿದ್ದು, ಇಲ್ಲಿನ ಜನತೆಗೆ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಿಕೊಡುವಲ್ಲಿ ಕ್ರಿಕೆಟ್ ದೇವರು ನೆರವಾಗಿದ್ದಾರೆ.

Write A Comment