ಮನೋರಂಜನೆ

ತೆರೆಮೇಲೆ ಯಾರಾಗುತ್ತಾರೆ ಕಲ್ಪನಾ ಚಾವ್ಲಾ..?

Pinterest LinkedIn Tumblr

kapa

2003ರಲ್ಲಿ ಏಳು ಜನ ಗಗನ ಯಾತ್ರಿಗಳ ಜೊತೆ ತಾನೂ ಒಬ್ಬಳಾಗಿ ಆಕಾಶಕ್ಕೆ ಹಾರಿದ ಭಾರತ-ಅಮೆರಿಕ ಮಿಶ್ರ ತಳಿಯ ಧೀರ ಮಹಿಳೆ ಕಲ್ಪನಾ ಚಾವ್ಲಾ ಅಂದು ಮೇಲೆ ಹಾರಿದವಳು ಮತ್ತೆ ಕೆಳಗಿಳಿ ಯಲೇ ಇಲ್ಲ.

ಚಿಕ್ಕ ವಯಸ್ಸಿಗೇ ವಿಶ್ವದಾದ್ಯಂತ ಹೆಸರು ಮಾಡಿ, ಮಿಂಚಿ ಮಾಯವಾದ ಕಲ್ಪನಾ ಚಾವ್ಲಾಳ ಜೀವನಗಾಥೆಯ ಚಿತ್ರವೊಂದು ಬಾಲಿವುಡ್ ನಲ್ಲಿ ತಯಾರಾಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಮಾಜಿ ಸುಂದರಿ ಪ್ರಿಯಾಂಕಾ ಚೋಪ್ರಾ ಆ ಪಾತ್ರದಲ್ಲಿ ವಿಜೃಂಭಿಸಲಿದ್ದಾಳೆ ಎಂಬ ವದಂತಿಯೂ ಇದೆ.

ಆದರೆ, ಪ್ರಿಯಾಂಕಾ ಮಾತ್ರ ಹೂ ಅಥವಾ ಉಹೂ ಎಂದಿಲ್ಲ. ಮೌನ ಧರಿಸಿದ್ದಾಳೆ…. ನನಗೆ ಯಾವ್ಯಾವೊ ಚಿತ್ರಗಳು ಬರುತ್ತಿವೆ. ನಾನಿನ್ನೂ ಯಾವುದನ್ನೂ ಆಯ್ಕೆ ಮಾಡಿಕೊಂಡಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಡು ತ್ತಾಳೆ ಮೇರಿ ಕೋಂ ಖ್ಯಾತಿ ಯ ಪಿಗ್ಗಿ.

Write A Comment