ನಟ ಸನ್ನಿ ಡಿಯೋಲ್ ಹಾಗೂ ನಟಿ ಅಮೀಶಾ ಪಟೇಲ್ ಪಾಲಿಗೆ ಬಾಲಿವುಡ್ ಸಿನಿ ಜರ್ನಿಯ ಚಕ್ರ ಮತ್ತೆ ಹಿಂದಕ್ಕೆ ತಿರುಗಿದೆ.
14 ವರ್ಷಗಳ ಹಿಂದೆ `ಗದ್ದರ್ ಏಕ್ ಪ್ರೇಮ್ ಕಥಾ ‘ ಚಿತ್ರದ ಮೂಲಕ ಒಂದಾಗಿದ್ದ ಈ ಜೋಡಿ ಮತ್ತೆ ರೋಮ್ಯಾನ್ಸ್ ಮಾಡಲು ಸಜ್ಜಾಗಿದೆ. ನಿರ್ದೇಶಕ ನೀರಜ್ ಪಾಠಕ್, `ಭಯ್ಯಾಜಿ ಸೂಪರ್ ಹಿಟ್’ಚಿತ್ರದ ಮೂಲಕ ಹಿಂದಿನಂತೆ ಜಾದೂ ಮಾಡಲು ಮುಂದಾಗಿದ್ದಾರೆ. ದೊಡ್ಡ ಗ್ಯಾಪ್ ನಂತರ ಸನ್ನಿ ಹಾಗೂ ಅಮೀಶಾ ಒಂದಾಗುತ್ತಿದ್ದು, ಹಳೇ ತಂಡವೇ ಇದಕ್ಕೆ ಸಾಥ್ ನೀಡುತ್ತಿದೆ. ಈ ಬಾರಿ ಈ ತಂಡಕ್ಕೆ ನಟ ಅರ್ಷದ್ ವಾರ್ಸಿ ಜತೆಯಾಗಿರುವುದು ವಿಶೇಷ. `ಗದರ್ಏಕ್ ಪ್ರೇಮ್ ಕಥಾ’ ಚಿತ್ರದ ನಂತರ ಅಮೀಶಾ ಮತ್ತು ಸನ್ನಿ ಡಿಯೋಲ್ `ಥೀಸ್ರಿ ಅಂಕ’ ಮತ್ತು `ದಿ ಹಿಡನ್ ಕ್ಯಾಮೆರಾ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಇದಾದ ನಂತರ ನೀರಜ್ ಪಾಠಕ್, ಇಬ್ಬರನ್ನು ಒಂದಾಗಿಸಿದ್ದಾರೆ. ಪ್ರೀತಿ ಜಿಂಟಾ, ಜಾಕಿ ಶ್ರಾಫ್ , ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ. ಚಿರಾಗ್ ದಾರಿವಾಲ್ ಈ ಚಿತ್ರದ ನಿರ್ಮಾಪಕರು. ಸಾಜಿದ್ವಾಜಿದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸನ್ನಿಗೆ ತಕ್ಕಂತೆ ಈ ಚಿತ್ರ ಆ್ಯಕ್ಷನ್ ಮತ್ತು ಕಾಮಿಡಿಗೆ ಹೆಚ್ಚು ಆದ್ಯತೆ ನೀಡಿದೆಯಂತೆ.