
ಮುಂಬೈ, ಡಿ.14: ಮುಂಬ ರುವ 2 ವರ್ಷಗಳ ಅವಧಿಗೆ ಆಟಗಾರರ ಬಿಕರಿ ಪ್ರಕ್ರಿಯೆಯೂ ನಾಳೆ ನಡೆಯಲಿದ್ದು ಹೊಸ ತಂಡಗಳಾದ ರಾಜ್‌ಕೋಟ್ ಮತ್ತು ಪುಣೆ ತಂಡಗಳ ಮಾಲೀಕರು ತೀವ್ರ ಕಸರತ್ತು ನಡೆಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಐಪಿಎಲ್‌ನಲ್ಲೂ ಉತ್ತಮ ನಾಯಕತ್ವವನ್ನು ನಿಭಾಯಿಸಿರುವ ಮಹೇಂದ್ರ ಸಿಂಗ್‌ರನ್ನು ಸೆಳೆದುಕೊಳ್ಳಲು ಎರಡು ತಂಡಗಳು ಉತ್ಸುಕ ರಾಗಿದ್ದಾರೆ.ಉಳಿದಂತೆ ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಜೆಂಕ್ಯಾ ರಹಾನೆ, ಸುರೇಶ್‌ರೈನಾಗೂ ಭಾರೀ ಬೇಡಿಕೆ ಇದೆ.