ಮನೋರಂಜನೆ

‘ದಿಲ್‌ವಾಲೆ’ ಒಪ್ಪಲು ಕಾರಣಗಳ ಕಂತೆ…

Pinterest LinkedIn Tumblr

kajol‘ದಿಲ್‌ವಾಲೆ’ ಚಿತ್ರದ ಪ್ರಸ್ತಾಪ ಬಂದ ಕೂಡಲೇ ಆಲೋಚನೆ ಮಾಡದೆ ಒಪ್ಪಿಕೊಂಡಿದ್ದಕ್ಕೆ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ ನಟಿ ಕಾಜೋಲ್‌. ‘ನನ್ನ ಮಗಳಿಗೆ ನಾನು ತೆರೆಯ ಮೇಲೆ ಅಳುವುದನ್ನು ನೋಡಲು ಆಗುವುದಿಲ್ಲ. ಇಂತಹ ಪಾತ್ರಗಳನ್ನು ಮಾಡಬೇಡ ಎಂದು ಖಡಾಖಂಡಿತವಾಗಿ ಹೇಳುತ್ತಾಳೆ. ನೀನೇಕೆ ಅಪ್ಪ ಮಾಡುವಂತಹ ಚಿತ್ರಗಳನ್ನು ಮಾಡುವುದಿಲ್ಲ? ಎಂದು  ಸಹ ಕೇಳುತ್ತಾಳೆ’ ಎನ್ನುವ ಸಂಗತಿಯನ್ನು ಕಾಜೋಲ್‌ ಹೇಳಿಕೊಂಡಿದ್ದಾರೆ.

‘ದಿಲ್‌ವಾಲೆ ಚಿತ್ರ ನನ್ನ ಪಾಲಿನ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಅಲ್ಲದೇ, ಇದು ನನ್ನ ಮಗಳಿಗೂ ಇಷ್ಟವಾಗುತ್ತದೆ ಎನ್ನುವ ಭರವಸೆ ಇದೆ. ಇದು ರೋಹಿತ್‌ ಶೆಟ್ಟಿ ಅವರ ಸಾಂಪ್ರದಾಯಿಕ ಸೂತ್ರಗಳನ್ನು ಇಟ್ಟುಕೊಂಡಿರುವುದರ ಜೊತೆಗೆ ಇನ್ನೂ ಹೆಚ್ಚಿನ ಮನರಂಜನೆಯನ್ನು ನೀಡುತ್ತದೆ’ ಎಂದಿದ್ದಾರೆ ಕಾಜೋಲ್‌.

‘ಇದೆಲ್ಲಕ್ಕಿಂತ ಮುಖ್ಯವಾಗಿ ಈ ಚಿತ್ರದಲ್ಲಿನ ನನ್ನ ಪಾತ್ರ ಬಹಳ ಸೊಗಸಾಗಿ ಮೂಡಿಬಂದಿದೆ. ವರುಣ್‌ ಹಾಗೂ ಕೃತಿ ಕೂಡ ಅತ್ಯುತ್ತಮವಾಗಿ ನಟಿಸಿದ್ದಾರೆ. ರೋಹಿತ್‌ ಶೆಟ್ಟಿ ಹಾಗೂ ಶಾರುಖ್‌ ಜೊತೆಗೆ ಕೆಲಸ ಮಾಡುವುದು ನನಗೆ ಬಹಳ ಖುಷಿ ಕೊಡುವ ವಿಚಾರ. ಇಂತಹ ಸಂಗತಿಗಳೇ ಈ ಚಿತ್ರವನ್ನು ಎರಡನೇ ಬಾರಿ ಯೋಚಿಸದೆ ಒಪ್ಪಿಕೊಳ್ಳುವಂತೆ ಮಾಡಿದ್ದು’ ಎನ್ನುವ ವಿವರಣೆ ನೀಡುತ್ತಾರೆ 41 ವರ್ಷ ವಯಸ್ಸಿನ ನಟಿ.

Write A Comment