ಮನೋರಂಜನೆ

‘ಲಕ್ಷ್ಮಣ’ ಟೀಸರ್ ಬಿಡುಗಡೆ ಮಾಡಲಿರುವ ಎಸ್ ಎಸ್ ರಾಜಮೌಳಿ

Pinterest LinkedIn Tumblr

anup-meghanaಬೆಂಗಳೂರು: ಅನೂಪ್ ಮತ್ತು ಮೇಘನಾ ರಾಜ್ ನಟಿಸಿರುವ, ಆರ್ ಚಂದ್ರು ಅವರ ‘ಲಕ್ಷ್ಮಣ’ ಸಿನೆಮಾ ಡಬ್ಬಿಂಗ್ ಹಂತದಲ್ಲಿದ್ದು ‘ಬಾಹುಬಲಿ’ ಖ್ಯಾತಿಯ ಎಸ್ ಎಸ್ ರಾಜಮೌಳಿ ಅವರು ಟೀಸರ್ ಬಿಡುಗಡೆ ಮಾಡಲಿದ್ದಾರೆ. “ಇದು ರಾಜಮೌಳಿ ಅವರಿಗೆ ನಮ್ಮ ಕೆಲಸವನ್ನು ತೋರಿಸುವ ಅವಕಾಶ. ಮುಂಬೈನಲ್ಲಿ ಟೀಸರ್ ನಿರ್ಮಾಣ ಕೆಲಸ ನಡೆಯುತ್ತಿದ್ದು ಮುಂದಿನ ೧೦ ದಿನಗಳಲ್ಲಿ ಲಭ್ಯವಾಗಲಿದೆ” ಎನ್ನುತ್ತಾರೆ ಚಂದ್ರು.

ನಾಯಕ ನಟನ ಬಗ್ಗೆ ಮಾತನಾಡುವ ಚಂದ್ರು “ಅನೂಪ್ ಅವರಿಗೆ ಒಳ್ಳೆಯ ಕಂಠವಿದೆ ಆದುದರಿಂದ ಅವರೇ ಡಬ್ ಮಾಡಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ಮುಂದಿನ ದಿನಗಳಲ್ಲಿ ಬೆಳಗಲಿರುವ ನಟ ಅವರು. ಅವರು ಹೊಸಬರಾಗಿದ್ದರೂ ನುರಿತವರಂತೆ ನಟಿಸಿದ್ದಾರೆ” ಎನ್ನುತ್ತಾರೆ ನಿರ್ದೇಶಕ. ಸಿನೆಮಾ ಚಿತ್ರೀಕರಣ ಸಂಪೂರ್ಣಗೊಳ್ಳಲು ಇನ್ನು ೩ ಹಾಡುಗಳಷ್ಟೇ ಬಾಕಿ ಉಳಿದಿರುವುದಂತೆ.

ಮೇಘನಾ ರಾಜ್ ಅನೂಪ್ ಅವರಿಗೆ ಸರಿಯಾದ ಜೋಡಿ ಎಂದು ತಿಳಿಸುವ ಚಂದ್ರು ಕನ್ನಡ ಚೆನ್ನಾಗಿ ಬಲ್ಲ ನಟಿ ಅವರು ಎನ್ನುತ್ತಾರೆ. ಲಕ್ಷ್ಮಣದಲ್ಲಿ ರವಿಚಂದ್ರನ್ ಪೊಲೀಸ್ ಅಧಿಕಾರಿಯ ಪೋಷಾಕು ಧರಿಸಿದ್ದಾರೆ.

Write A Comment