ಮನೋರಂಜನೆ

ಅಮಿತ್ ಮಿಶ್ರಾ ಬಂಧನ, ಬಿಡುಗಡೆ

Pinterest LinkedIn Tumblr

Amith_ಬೆಂಗಳೂರು, ಅ.27: ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಮೇಲೆ ಹಲ್ಲೆ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಬಂಧಿತನಾಗಿದ್ದ ಕ್ರಿಕೆಟಿಗ ಅಮಿತ್ ಮಿಶ್ರಾ ಸ್ಟೇಷನ್ ಬೇಲ್ ಮೇಲೆ ಬಿಡುಗಡೆಗೊಂಡಿದ್ದಾರೆ.
ವಂದನಾ ಜೈನ್ ಅವರ ದೂರು ದಾಖಲಿಸಿ ಕೊಂಡಿದ್ದ ಅಶೋಕ್‌ನಗರ ಠಾಣಾ ಪೊಲೀಸರು, ಅಮಿತ್ ಮಿಶ್ರಾರನ್ನು ವಿಚಾರಣೆಗೊಳಪಡಿಸಿದ ಬಳಿಕ ಹಲ್ಲೆ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆಯೆಂಬ ಹಿನ್ನೆಲೆಯಲ್ಲಿ 325, 354 ಎ ಸೆಕ್ಷನ್ ಅಡಿ ಅವರನ್ನು ಬಂಧಿಸಿದ್ದರು. ಮಿಶ್ರಾ ಅವರ ಸ್ನೇಹಿತ ಜಾಮೀನು ನೀಡಿದ್ದರಿಂದ ಸ್ಟೇಷನ್ ಬೇಲ್ ಮೇಲೆ ಅವರನ್ನು ಬಿಡುಗಡೆಗೊಳಿಸಲಾಯಿತು. ಟೀಂ ಇಂಡಿಯಾದ ಕ್ರಿಕೆಟಿಗ ಅಮಿತ್ ಮಿಶ್ರಾ ಅವರು ಸೆ.25ರ ತಡರಾತ್ರಿ ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ವಂದನಾ ಜೈನ್ ಅವರು ದೂರು ದಾಖಲಿಸಿದ್ದರು. ಆ ಹಿನ್ನೆಲೆಯಲ್ಲಿ ಅಶೋಕ್‌ನಗರ ಠಾಣೆ ಪೊಲೀಸರು ವಿಚಾರಣೆಗೊಳಗಾಗುವಂತೆ ಮಿಶ್ರಾಗೆ ನೋಟಿಸ್ ಜಾರಿಗೊಳಿಸಿದ್ದರು.
ತನಿಖೆಯ ಬಳಿಕ ಮಿಶ್ರಾರನ್ನು ಬಂಧಿಸಿದ ಪೊಲೀಸರು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Write A Comment