ಮನೋರಂಜನೆ

ಸನ್ನಿ ಸೆಕ್ಸ್ ಕಾಮೆಡಿ ‘ಮಸ್ತಿ ಝಾದೆ’

Pinterest LinkedIn Tumblr

sunnyಬಾಲಿವುಡ್‌ನ ಬೋಲ್ಡ್ ಆಂಡ್ ಬ್ಯೂಟಿಫುಲ್ ಬೆಡಗಿ ಸನ್ನಿ ಲಿಯೋನ್ ಹೆಸರು ಹೇಳಿದರೆ ಸಾಕು, ಅಭಿಮಾನಿಗಳ ಕಿವಿ, ಕಣ್ಣು ಎಲ್ಲ ಚುರುಕಾಗಿಬಿಡುತ್ತವೆ. ಏಕೆಂದರೆ, ಅವಳ ಚಾರ್ಮೇ ಅಂಥದ್ದು. ಮೊನ್ನೆ ಇದ್ದಕ್ಕಿದ್ದಂತೆ ಸನ್ನಿ ತನ್ನ ಗಂಡ ಡ್ಯಾನಿಯಲ್ ವೆಬರ್‌ಗೆ ಒಂದು ಅತ್ಯಂತ ಅಚ್ಚರಿಯ ಬರ್ತ್‌ಡೆ ಪಾರ್ಟಿ ಫೋಟೋಗಳನ್ನು ಹಾಕಿ ಅವನಿಗೆ ಆಶ್ಚರ್ಯ ಉಂಟುಮಾಡಿದಳಂತೆ.
ಇದೇ ಸನ್ನಿ ಲಿಯೋನ್ ಕತೆಗಾರ ಮತ್ತು ಚಿತ್ರ ನಿರ್ಮಾಪಕ ಮಿಲಪ್ ಝ ವೇರಿ ಅವರ ಮಹತ್ವಾಕಾಂಕ್ಷೆಯ ಸೆಕ್ಸ್ ಕಾಮೆಡಿ ‘ಮಸ್ತಿಝಾದೆ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾಳಂತೆ. ಅದೂ ದ್ವಿಪಾತ್ರದಲ್ಲಿ… ಇನ್ನು ಆ ಸಿನಿಮಾ ಅದಿನ್ನೆಷ್ಟು ಅದ್ಭುತವಾಗಿರುತ್ತೋ ಅನ್ನೋದು ಅಭಿಮಾನಿಗಳ ಕುತೂಹಲ. ಮುಂಬೈನಲ್ಲಿದ್ದ ಈ ಸುಂದರಿ ಮೊನ್ನೆ ದುಬೈಗೆ ಹಾರಿದ್ದಳು.

ಅಲ್ಲಿ ನಡೆದ ಬರ್ತ್‌ಡೇ ಪಾರ್ಟಿಯಲ್ಲಿ ಬಂದ ಅತಿಥಿಗಳ ಜತೆ ಸನ್ನಿ ಹರಟಿದ್ದೇ ಹರಟಿದ್ದಂತೆ. ಅದೇ ಚಿತ್ರಗಳನ್ನು ಸನ್ನಿ ಎಂಬ ಈ ಬೆಡಗಿ ತನ್ನ ಗಂಡನ ಫೇಸ್‌ಬುಕ್ ಹಾಕಿ ಅವನನ್ನು ಬೆರಗಾಗಿಸಿದಳಂತೆ. ಅವಳು ಪಾರ್ಟಿಯಲ್ಲಿ ಏನೇನು ಮಾಡಿದ್ಲೋ ಅದೆಲ್ಲ ಆ ವಿಡಿಯೋದಲ್ಲಿತ್ತಂತೆ..!

Write A Comment