ಮನೋರಂಜನೆ

ವಿರಾಟ್- ಅನುಷ್ಕಾ ಮಧ್ಯೆ ಏನಾಗಿದೆ…?

Pinterest LinkedIn Tumblr

virat

ಮುಂಬೈ. ಅ.25: ಇತ್ತೀಚೆಗಷ್ಟೇ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದ ಭರ್ಜರಿ ಜಯಬೇರಿಸಿದ ಟೀಂ ಇಂಡಿಯಾದ ಸ್ಪೋಟಕ ಬ್ಯಾಟ್ಸ್‍ಮ್ಯಾನ್ ವಿರಾಟ್ ಕೊಹ್ಲಿ ತನ್ನ ಪ್ರೇಯಸಿ ಅನುಷ್ಕಾ ಶರ್ಮಾ ಹಾಗೂ ಆಕೆಯಾ ತಂದೆ ಅಜಯ್ ಕುಮಾರ್ ಶರ್ಮಾ ಅವರೊಂದಿಗೆ ಊಟಕ್ಕೆ ಹೋಗಿ ಬಂದಿದ್ದಾರೆ, ಆದರೆ ಇಬ್ಬರು ಪ್ರೇಮ ಪಕ್ಷಿಗಳಲ್ಲಿ ಮೊದಲಿದ್ದ ಲವಲವಿಕೆ ಕಾಣುತ್ತಿರಲಿಲ್ಲ ಎಂಬುದು ಕುತೂಹಲ ಕೆರಳಿಸಿದೆ.

ಜೊತೆಗೆ ನಡೆದುಕೊಂಡು ಹೋಗುವಾಗಲೂ ಅನುಷ್ಕಾ ಮತ್ತು ವಿರಾಟ್ ನಡುವೆ ದೊಡ್ಡ ಅಂತರವೇ ಇತ್ತು. ಬೇರೆ ಸಂದರ್ಭದಲ್ಲಿ ಆದರೆ ಕೈ ಕೈ ಹಿಡಿದು ಓಡಾಡುತ್ತಿದ್ದ ಈ ಜೋಡಿ ಈ ಸಾರಿ ಹಾಗೆ ಕಾಣಿಸಲೇ ಇಲ್ಲ. ಕೈ ಕೈ ಹಿಡಿಯುವುದು ಬಿಡಿ, ಸ್ವಲ್ಪ ನಗು ಕೂಡಾ ಮುಖದಲ್ಲಿ ಇರಲಿಲ್ಲ. ಹೀಗಾಗಿ, ಈ ಜೋಡಿ ಇನ್ನೂ ತಮ್ಮ ಮುನಿಸನ್ನು ಶಮನ ಮಾಡಿಕೊಂಡಿಲ್ಲ ಎಂದೇ ಕೆಲವರು ಹೇಳುತ್ತಿದ್ದಾರೆ. ಆದರೆ, ನಿಜವಾಗಿ ಏನು ನಡೆದಿದೆ ಎಂದು ಗೊತ್ತಿಲ್ಲ. ಆದರೆ ಕಳೆದ ಅ.23ರಂದು ಮುಂಬೈಗೆ ಬೇಟಿ ನೀಡಿದ್ದ ಈ ಜೋಡಿ ತಂದೆ ಅಜಯ್ ಕುಮಾರ್ ಶರ್ಮಾ ಅವರೊಂದಿಗೆ ಹೋಟೆಲ್‍ನಲ್ಲಿ ಊಟ ಮುಗಿಸಿ ನಂತರ ವರ್ಲಿಯಲ್ಲಿನ ಓಂಕಾರ 1973 ಅರ್ಪಾಟ್‍ಮೆಂಟ್‍ಗೆ ಹೋಗಿ ಬಂದಿದ್ದಾರೆ ಕಾರಣ ಇವರು ನಿವಾಸ ಕೊಳ್ಳವ ಬರದಲ್ಲಿದ್ದಾರೆ ಎಂದು ಪಿಂಕ್‍ವಿಲ್ಲಾ ಪ್ರಕಟಿಸಿದೆ. ವರ್ಲಿಯಲ್ಲಿ ಕನಸಿನಮನೆ ಕೊಳ್ಳಬೇಕೆಂಬ ಆಸೆ ಈಡೆಸಿಕೊಳ್ಳಲು ಈ ಜೋಡಿ ಮುಂದಾಗಿದೆ. ಆದರೂ ಇಬ್ಬರು ಸಪ್ಪಗೆ ಇದ್ದಾಂತೆ ಕಂಡು ಬಂದಿದೆ.

ಈ ಮಧ್ಯೆ ವಿರಾಟ್ ಹಾಗೂ ಅನುಷ್ಕಾ ನಡುವೆ ಭಿನ್ನಾಬಿಪ್ರಾಯ ಇದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಒಟ್ಟಿನಲ್ಲಿ ಜನರಲ್ಲಿ ಮಾತ್ರ ಈ ಜೋಡಿ ಭಾರಿ ಕುತೂಹಲ ಕೆರಳಿಸುತ್ತಲೇ ಇದೆ.

Write A Comment