ಸಾಯಿಕುಮಾರ್ ನಟನೆಯ ಐತಿಹಾಸಿಕ ಚಿತ್ರ ‘ವೀರ ಮಡಿವಾಳ ಮಾಚಿದೇವ’ದ ಮೊದಲ ಪ್ರತಿ ಸಿದ್ಧವಾಗಿದೆ. ನಂದಿ ಕಾಮೇಶ್ವರ ರೆಡ್ಡಿ ಈ ಚಿತ್ರದ ನಿರ್ದೇಶಕ. ಟಿ. ಸಿದ್ದೇಶ್ವರ ನಿರ್ಮಾಪಕರು. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ತಯಾರಿಸಿದ್ದಾರೆ.
13 ವಚನಗಳಿಗೆ ಹಂಸಲೇಖ ರಾಗ ಸಂಯೋಜಿಸಿದ್ದಾರೆ. ಗಜೇಂದ್ರ ಸಂಭಾಷಣೆ, ರಾಮ್ ಛಾಯಾಗ್ರಹಣವಿದೆ. ಚಾರುಲತಾ, ರಮೇಶ್ ಭಟ್, ವಿಜಯಕಾಶಿ, ಬಿ.ಸಿ. ಪಾಟೀಲ್, ಶ್ರೀನಿವಾಸಪ್ರಭು, ಸತ್ಯಜಿತ್, ಸತ್ಯಪ್ರಕಾಶ್, ಉಮೇಶ್ ಇತರರು ನಟಿಸಿದ್ದಾರೆ.