ಮುಂಬೈ: ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರ ‘ಪ್ರೇಮ್ ರತನ್ ಧನ ಪಾಯೋ’ ಸಿನೆಮಾ ಹಲವಾರು ಕಾರಣಗಳಿಂದ ಸಿನೆ ಅಭಿಮಾನಿಗಳ ಕುತೂಹಲವನ್ನು ಏರಿಸುತ್ತಲೇ ಇದೆ. ಸಿನೆಮಾದ ‘ಜಲ್ತೆ ದಿಯೇ’ ಹಾಡಿನ ಚಿತ್ರೀಕರಣಕ್ಕೆ 7000 ಹಣತೆಗಳನ್ನು ಬಳಸಿಕೊಂಡಿರುವುದಾಗಿ ಚಿತ್ರತಂಡ ತಿಳಿಸಿದೆ.
ಈ ಹಾಡಿನ ಚಿತ್ರೀಕರಣಕ್ಕಾಗಿ ಆ ದೀಪಗಳನ್ನು ಹಚ್ಚಿ ಸದಾ ಉರಿಯುವಂತೆ ನೋಡಿಕೊಳ್ಳಲು 150 ಜನರಿಗೆ ಕೆಲಸ ಹಿಡಿಯಿತು ಎಂದು ಹೇಳಿಕೆಯಲ್ಲಿ ಬುಧವಾರ ತಿಳಿಸಿದ್ದಾರೆ.
“ಹಾಡಿಗೆ ರಾಜ ವೈಭವತೆ ತರಲು ಸೂರಜ್ (ಬರ್ಜತ್ಯ) ಬಹಳ ಶ್ರಮವಹಿಸಿದರು. ದೀಪಗಳನ್ನು ಹಚ್ಚಿ ಅವುಗಳು ಉರಿಯುವಂತೆ ನೋಡಿಕೊಳ್ಳಲು ೧೫೦ ಜನರಿಗೆ ಕೆಲಸ ಹಿಡಿಯಿತು” ಎಂದು ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಲ್ಮಾನ್ ಮತ್ತು ಬರ್ಜತ್ಯ 16 ವರ್ಷಗಳ ನಂತರ ಮತ್ತೆ ಒಟ್ಟಿಗೆ ಕೆಲಸ ಮಾಡಿದ್ದು, ಸೋನಮ್ ಕಪೂರ್, ನೀಲ್ ನಿತಿನ್ ಮುಖೇಶ್ ಮತ್ತು ಅನುಪಮ್ ಖೇರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ದೀಪಾವಳಿ ಹಬ್ಬಕ್ಕೆ ನವೆಂಬರ್ 12 ರಂದು ಸಿನೆಮಾ ಬಿಡುಗಡೆಯಾಗಲಿದೆ.