ಮನೋರಂಜನೆ

ಕಾನ್ಪುರ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಧೋನಿ -ಕೊಹ್ಲಿ ಜಗಳವೇ ಕಾರಣ ! ಇಬ್ಬರ ಮಧ್ಯೆ ಜಗಳಕ್ಕೆ ಕಾರಣ..ಇಲ್ಲಿದೆ ನೋಡಿ…

Pinterest LinkedIn Tumblr

virat-kohli-ms

ಕಾನ್ಪುರ; ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಉಪನಾಯಕ ವಿರಾಟ್ ಕೊಹ್ಲಿ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಭಾರತ ತಂಡ, ಕಾನ್ಪುರದಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋಲಬೇಕಾಯಿತು ಎಂದು ಇಂಡಿಯಾ ಟಿವಿ ವರದಿ ಮಾಡಿದೆ.

ವರದಿಯ ಪ್ರಕಾರ, ಕಾನ್ಪುರ ಪಂದ್ಯಕ್ಕೂ ಮುನ್ನ, ಧೋನಿ ಹಾಗೂ ಕೊಹ್ಲಿ ನಡುವೆ ವಾಗ್ವಾದ ನಡೆದಿದೆ. ವಿರಾಟ್ ಕೊಹ್ಲಿಯವರು 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದರು. ಆದರೆ, ನಾಯಕ ಧೋನಿಯವರ ಆಲೋಚನೆ ಬೇರೆಯಿತ್ತು. 3ನೇ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆಯವರನ್ನು ಕಣಕ್ಕಿಳಿಸಲು ಅವರು ನಿರ್ಧರಿಸಿದ್ದರು. ಹಾಗಾಗಿ, ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು ಎಂಬುದು ಅವರ ಇರಾದೆಯಾಗಿತ್ತು. ಇದನ್ನು ಪಂದ್ಯ ಶುರುವಾಗಲು ಕೆಲವು ಗಂಟೆಗಳ ಮುನ್ನ ಧೋನಿ ಇದನ್ನು ಆಟಗಾರರೊಂದಿಗೆ ಚರ್ಚಿಸಿದರು. ಇದು ಕೊಹ್ಲಿಗೆ ಸಿಟ್ಟು ತರಿಸಿತು. ಧೋನಿ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು ಜಗಳಕ್ಕಿಳಿದರು. ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತ್ರವಲ್ಲದೆ, ತಂಡದಲ್ಲಿ ಅಜಿಂಕ್ಯ ರಹಾನೆಗೆ ಸ್ಥಾನ ಕೊಟ್ಟಿದ್ದಕ್ಕೂ ಕೊಹ್ಲಿ ವಿರೋಧ ವ್ಯಕ್ತಪಡಿಸಿದರು.

ಕೊಹ್ಲಿಯ ವಾದ ಧೋನಿಗೂ ಸರಿಬೀಳಲಿಲ್ಲ. ಹಾಗಾಗಿ, ಇಬ್ಬರ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಯಿತು ಎನ್ನಲಾಗಿದೆ. ಇದರ ಪರಿಣಾಮ ಮೈದಾನದಲ್ಲಾಯಿತು ಎನ್ನಲಾಗಿದೆ. ಧೋನಿ ಆಣತಿಯಂತೆ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಇಳಿದ ಕೊಹ್ಲಿ 11 ರನ್ ಮಾತ್ರ ಗಳಿಸಿ ಔಟಾಗಿದ್ದರು. ಇದನ್ನು, ಪಂದ್ಯ ಸೋತ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿಯವರ ಪ್ರದರ್ಶನದ ಬಗ್ಗೆ ಪರೋಕ್ಷವಾಗಿ ಹೇಳಿದ ಧೋನಿ, “ಪಂದ್ಯದ ಆರಂಭದಿಂದಲೂ ನಾವು ಉತ್ತಮ ರನ್ ಪೇರಿಸುತ್ತಾ ಸಾಗಿದ್ದೆವು. ಆದರೆ, ಇನಿಂಗ್ಸ್‍ನ 34ನೇ ಓವರ್‍ನಿಂದ 40ನೇ ಓವರ್‍ವರೆಗೆ ನಾವು ನಿರೀಕ್ಷಿತ ಪ್ರಮಾಣದಲ್ಲಿ ರನ್ ಪೇರಿಸಲಿಲ್ಲ. ಸೋಲಿಗೆ ಇದೂ ಒಂದು ಕಾರಣ. ” ಎಂದಿದ್ದರು. ಪಂದ್ಯದ ಸ್ಕೋರ್ ವಿವರ ನೋಡಿದಾಗ, ಧೋನಿ ಹೇಳಿದ್ದು ಸ್ಪಷ್ಟವಾಗಿ ಅರ್ಥವಾಗುತ್ತದೆ. 34ನೇ ಓವರ್ ನಲ್ಲಿ ರಹಾನೆ ಔಟಾದಾಗ ಕ್ರೀಸ್‍ಗೆ ಬಂದಿದ್ದ ಕೊಹ್ಲಿ, 40ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಸುಮಾರು ಆರು ಓವರ್ ಗಳ ಕಾಲ ಕ್ರೀಸ್ ನಲ್ಲಿದ್ದರು. 18 ಎಸೆತಗಳಲ್ಲಿ ಅವರು ಕೇವಲ 11 ರನ್ ಗಳಿಸಿದ್ದೇ ಸೋಲಿಗೆ ಪ್ರಮುಖ ಕಾರಣಗಳಲ್ಲೊಂದು ಎನ್ನುತ್ತಾರೆ ಕ್ರಿಕೆಟ್ ತಜ್ಞರು.

ಜಗಳದ ವರದಿ ತಳ್ಳಿ ಹಾಕಿದ ಧೋನಿ
ಕಾನ್ಪುರ ಪಂದ್ಯಕ್ಕೂ ಮುನ್ನ ಜಗಳವಾಡಿದ ವರದಿಗಳನ್ನು ನಾಯಕ ಧೋನಿ ತಳ್ಳಿ ಹಾಕಿದ್ದಾರೆ. ಆ ರೀತಿಯ ಯಾವುದೇ ಸಮಸ್ಯೆಗಳು ತಂಡದಲ್ಲಿಲ್ಲ. ನಮ್ಮ ತಂಡದಲ್ಲಿ ಒಗ್ಗಟ್ಟಿದೆ. ಡ್ರೆಸ್ಸಿಂಗ್ ರೂಮ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದಿದ್ದಾರೆ. ಅತ್ತ, ಕೊಹ್ಲಿ ಮಾತ್ರ ಅನೇರವಾಗಿ ತಮ್ಮ ಅಸಮಾಧಾನ ವ್ಯಕ್ತವಾಗಿದ್ದು, “ನಾವು (ಟೀಂ ಇಂಡಿಯಾ) ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗಿದ್ದೇವೆ. ಹಾಗಾಗಿ, ಪಂದ್ಯವನ್ನು ಸೋತಿದ್ದೇವೆ” ಎಂದು ಸೂಚ್ಯವಾಗಿ ಹೇಳಿದ್ದಾರೆ.

Write A Comment