ಮನೋರಂಜನೆ

ಮಾಲಾಶ್ರೀ ಸಿನಿ ಪಯಣಕ್ಕೆ 25 ವರ್ಷಗಳ ಸಂಭ್ರಮ

Pinterest LinkedIn Tumblr

malaನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಲುವೆ ಮಾಲಾಶ್ರೀ. 90ರ ದಶಕದಲ್ಲಿ ಪಡ್ಡೆಗಳ ಹೃದಯದಲ್ಲಿ ಕಿಚ್ಚು ಹಚ್ಚಿಸಿದ್ದ ಕನಸಿನ ರಾಣಿಯ ಸಿನಿ ಪಯಣಕ್ಕೀಗ 25 ವರ್ಷಗಳ ಸಂಭ್ರಮ.

ಮಾಲಾಶ್ರೀ. ಒಂದು ಕಾಲದಲ್ಲಿ ಈ ಹೆಸರು ಕೇಳಿದ್ರೆ ಯುವಕರ ಝಲ್ಲೆನ್ನುತ್ತಿತ್ತು. ಅಪ್ಪಟ ಮನೆ ಮಗಳು, ಗಂಡು ಬೀರಿ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಸೈ ಅನ್ನಿಸಿಕೊಂಡವರು ಮಾಲಾಶ್ರೀ. ನಂಜುಂಡಿ ಕಲ್ಯಾಣದ ಅವರ ಕಲ್ಯಾಣಿ ಪಾತ್ರ, ಹೃದಯ ಹಾಡಿತು ಸಿನಿಮಾದ ಆಶಾ, ಬೆಳ್ಳಿಕಾಲುಂಗುರದ ಅಳುಮುಂಜಿ ಹೀಗೆ ಅವರ ಮಾಡಿದ ಮಾಡಿದ ಪಾತ್ರಗಳೆಲ್ಲಾ ಇಂದಿಗೂ ಅವರ ಹೆಸರು ಬಂದಾಗ ಕಣ್ಣ ಮುಂದೆ ಬರುತ್ತೆ.

ಸದ್ಯ ಆಕ್ಷನ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಮಾಲಾಶ್ರೀ ಅವುಗಳಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಅವರ ಗಂಗಾ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಸಿನಿಮಾದ ಬಗ್ಗೆ ಅವರ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕಾತುರಗಳಿವೆ.

Write A Comment