ಸದ್ಯದಲ್ಲೇ ಆರಂಭವಾಗಲಿರುವ ಹಿಂದಿಯ ಬಿಗ್‌ಬಾಸ್‌ನ ಮಹಾಮನೆ ಪ್ರವೇಶಕ್ಕೆ ಬಹುತೇಕ ಎಲ್ಲ ಸೆಲೆಬ್ರಿಟಿಗಳೂ ಪಕ್ಕಾಗಿದ್ದು, ಇನ್ನು ಕೊನೆಯದಾಗಿ ಹೇಟ್ ಸ್ಟೋರಿ-2 ಖ್ಯಾತಿಯ ಬಾಲಿವುಡ್ ಬೆಡಗಿ ಸುರ್ವೀನ್ ಚಾವ್ಲಾಳ ಹೆಸರು ಸೇರ್ಪಡೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾತುಗಳು ಈಗ ಗಾಂಧಿ ನಗರದ ಬೀದಿಗಳಲ್ಲಿ ದಟ್ಟವಾಗಿ ಕೇಳಿಬರುತ್ತಿದೆಯಂತಲ್ಲ.. ಬಹುಶಃ ಸುರ್ವೀನ್ ಎಂಬ ಸುಂದರಿಯ ಸೇರ್ಪಡೆಗೆ ಕಾಲ ಸನ್ನಿಹಿತವಾಗಿದೆ ಎಂಬುದು ಇತ್ತೀಚಿನ ಸುದ್ದಿ. ಈಗಾಗಲೇ ಬಿಗ್‌ಬಾಸ್‌ನ 9ನೆ ಸೀಸನ್‌ನ ಆಯೋಜಕರು
ಸುರ್ವಿನ್‌ಳನ್ನು ಭೇಟಿ ಮಾಡಿ ಈ ಬಗ್ಗೆ ಪ್ರಸ್ತಾಪ ಮಾಡಿಯಾಗಿದೆಯಂತೆ. ಇವರ ಮನವಿಗೆ ಸುರ್ವಿ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾಳಂತೆ. ಬಿಗ್‌ಬಾಸ್ ಮಹಾಮನೆಗೆ ತಾನು ಬರುವ ಬಗ್ಗೆ ಮಾಹಿತಿ ನೀಡಿದ್ದಾಳಂತೆ. ಈ ಹೇಟ್ ಸ್ಟೋರಿ-2ರ ಸುಂದರಿ ಕಲರ್ಸ್ಾ ‘ಕಾಮೆಡಿ ನೈಟ್ಸ್ ಬಚಾವೊ’ದಲ್ಲಿ ಕಾಣಿಸಿಕೊಂಡಿದ್ದಳಲ್ಲ. ಸದ್ಯದ ಮಾಹಿತಿಗಳ ಪ್ರಕಾರ ಸುರ್ವೀನ್ ಚಾವ್ಲಾ ಹಾಗೂ ಬಿಗ್‌ಬಾಸ್ ಆಯೋಜಕರ ನಡುವೆ ಮಾತುಕತೆಗಳು ಜೋರಾಗಿಯೇ ನಡೆದಿವೆಯಂತೆ. ಇನ್ನೇನು ಈ ವೇಳೆಗೆ ಸುರ್ವಿ ಸಹಿ ಹಾಕಿರುತ್ತಾಳೆ ಬಿಗ್‌ಬಾಸ್ ಅಗ್ರಿಮೆಂಟ್‌ಗೆ. ಸುರ್ವಿ ಜತೆಗೇ ಎಂಟಿವಿಯ ಸ್ಪ್ಲಿಟ್ಸ್‌ವಿಲ್ಲಾ ಖ್ಯಾತಿಯ ರಿಷಬ್ ಸಿನ್ಹಾ ಆಗಮಿಸುತ್ತಿದ್ದಾನಂತೆ ಬಿಗ್‌ಬಾಸ್-9ಗೆ.