ಬಾಲಿವುಡ್ ಸೂಪರ್ ಸ್ಟಾರ್ ಮತ್ತು ಒಂದು ಕಾಲದ ಆಂಗ್ರಿ ಯಂಗ್ ಮನ್ ಅಮಿತಾಭ್ ಬಚ್ಚನ್ ಅವರಿಗೆ ವಿಶ್ವಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅವರು ಯಾವುದೇ ಕಾರ್ಯಕ್ರಮಕ್ಕೆ ಆಗಮಿಸಿದರೂ ಅಥವಾ ಅವರೆಲ್ಲೇ ಕಂಡುಬಂದರೂ ಅವರ ಸುತ್ತಾ ನೂರಾರು ಅಭಿಮಾನಿಗಳು ಸುತ್ತುವರೆಯುತ್ತಾರೆ. ಇಂತಹ ಅಭಿಮಾನಿಗಳ ಪಟ್ಟಿಗೆ ಇಲ್ಲೊಬ್ಬ ವಿಶೇಷ ಅತಿಥಿ ಸೇರ್ಪಡೆಯಾಗಿದ್ದಾನೆ.
ಆದರೆ ವಿಚಿತ್ರವೆಂದರೆ ಈ ವಿಶೇಷ ಅತಿಥಿ ಮಾನವನಲ್ಲ. ಬದಲಿಗೆ ಇಡೀ ಕಾಡನ್ನೇ ನಡುಗಿಸುವ ಡಾಡಿನ ರಾಜ ಹುಲಿ. ಹೌದು.. ಮಂಗಳವಾರ ಮುಂಬೈ ಗ್ರಾಮಾಂತರ ಪ್ರದೇಶದ ಬೊರಿವಿಲಿಯಲ್ಲಿರುವ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ ಈ ಹುಲಿರಾಯ ಬಿಗ್ ಬಿಯನ್ನು ಸುಮಾರು 4 ಕಿಲೋ ಮೀಟರ್ ದೂರದವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾನಂತೆ. ಆಶ್ಚರ್ಯ ಆದರೂ ಇದು ಸತ್ಯ. ಈ ವಿಚಾರವನ್ನು ಸ್ವತಃ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರೇ ಹೇಳಿಕೊಂಡಿದ್ದು, ಹುಲಿಯೊಂದಿಗಿನ ಆ ಅಪರೂಪ ಮತ್ತು ರೋಚಕ ಕ್ಷಣಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಚ್ಚಿಟ್ಟಿದ್ದಾರೆ.
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಮಹಾರಾಷ್ಟ್ರದ ಕೆಲ ಸಚಿವರು ಮತ್ತು ಮಂತ್ರಿಗಳೊಂದಿಗೆ ಸೇರಿ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ ಗೆ ಸಫಾರಿಗೆ ಹೋಗಿದ್ದಾರೆ. ಈ ವೇಳೆ ದಿಢೀರನೆ ಹುಲಿಯೊಂದು ಅವರ ಬೆನ್ನು ಹತ್ತಿದ್ದು, ಬರೋಬ್ಬರಿ ನಾಲ್ಕು ಕಿಲೋ ಮೀಟರ್ ನಷ್ಟು ಹಿಂಬಾಲಿಸಿದೆ. ಈ ಚಿತ್ರಗಳನ್ನು ಸ್ವತಃ ಅಮಿತಾಬ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.
ಮಹಾರಾಷ್ಟ್ರದ ಹುಲಿ ಸಂರಕ್ಷಣಾ ರಾಯಭಾರಿಯೂ ಕೂಡ ಆಗಿರುವ ಅಮಿತಾಬ್ ಬಚ್ಚನ್ ಅವರು ಈ ಚಿತ್ರಗಳನ್ನು ತಮ್ಮ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿಕೊಂಡಿದ್ದು. ಇದೊಂದು ಅದ್ಭುತ ಅನುಭವ .. ಹುಲಿ ಸಾಮಾನ್ಯವಾಗಿ ಇಷ್ಟೊಂದು ದೂರ ಹಿಂಬಾಲಿಸುವುದಿಲ್ಲ ಎಂದು ತಮ್ಮ ಖುಷಿಯ ಅನುಭವ ಹಂಚಿಕೊಂಡಿದ್ದಾರೆ.
T 2019 – Chased by a Tiger in the heart of Mumbai for 4 kms .. what an experience !! More on this later !!
— Amitabh Bachchan (@SrBachchan) October 6, 2015
T 2019 – In close company of the Big Cat .. !! And this on a road in the heart of the city .. pic.twitter.com/BNH2EZSKvR
— Amitabh Bachchan (@SrBachchan) October 6, 2015