ಮನೋರಂಜನೆ

ಕೋಲಾರ ಸಿನಿಮಾದಲ್ಲಿ ಬಾಲ ಗಾನ ಸುಧೆ

Pinterest LinkedIn Tumblr

balaಸದ್ಯ ಲೂಸ ಮಾದ ಯೋಗೀಶ್ ನಟಿಸುತ್ತಿರುವ ಸಿನಿಮಾ ಕೋಲಾರ. ರೌಡಿಸಂ ಕಥ ಹಂದರವಿರುವ ಈ ಸಿನಿಮಾದ ಶೂಟಿಂಗ್ ಇದೀಗ ಕೊನೆಯ ಹಂತ ತಲುಪಿದೆ. ಮೊನ್ನೆ ಮೊನ್ನೆಯಷ್ಟೇ ಸಿನಿಮಾದ ಟಪ್ಪಾಂಗುಚ್ಚಿ ಸಾಗಂ ನ ಶೂಟಿಂಗ್ ನಡೀತು.
ವಿಶೇಷ ಅಂದ್ರೆ ಈ ಟಪ್ಪಾಂಗುಚ್ಚಿ ಹಾಡಿನಲ್ಲಿ ಕಾಲಿವುಡ್ ಖ್ಯಾತ ಗಾಯಕ ಗಾನಬಾಲ ನಟಿಸಿದ್ದಾರೆ. ಇನ್ನು ಈ ಹಾಡನ್ನು ಸ್ವತಃ ಗಾನಬಾಲ ಅವರೇ ಹಾಡಿದ್ದಾರೆ. ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿರುವ ಗಾನಬಾಲ ಸಂತಸ ವ್ಯಕ್ತಪಡಿಸಿದ್ದಾರೆ. ಆರ್ಯ ಎಂ ಮಹೇಶ್ ನಿರ್ದೇಶನದ ಈ ಸಿನಿಮಾದಲ್ಲಿ ಯೋಗೀಶ್ ಢಿಪರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾ ಕೋಲಾರದ ಕೆಜಿಎಫ್ ನ ರೌಡಿ ತಂಗನ ಕುರಿತಾದ ಸಿನಿಮಾವಂತೆ. ತಮಿಳು ಹಿನ್ನೆಲೆಯುಳ್ಳ ಈ ಸಿನಿಮಾದಲ್ಲಿ ಬಹು ದೊಡ್ಡ ತಾರಾಗಣವಿದೆ. ಇನ್ನು ಸಿನಿಮಾದಲ್ಲಿ ತಮಿಳು ಹಿನ್ನೆಲೆಯವರೇ ಹಾಡಿದ್ರೆ ಉತ್ತಮ ಅನ್ನೋ ಕಾರಣಕ್ಕೆ ಸಿನಿಮಾದಲ್ಲಿ ಗಾನ ಬಾಲ ಅವರಿಂದ ಹಾಡಿಸಲಾಗಿದೆಯಂತೆ. ಈಗಗಾಲೇ ಈ ಸಿನಿಮಾ ನಾನಾ ಕಾರಣಗಳಿಂದ ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಹುಟ್ಟಿಸಿದ್ದು, ಅತೀ ಶೀಘ್ರದಲ್ಲಿ ಪ್ರೇಕ್ಷಕರೆದುರಿಗೆ ಬರಲಿದೆ.

Write A Comment