ಮನೋರಂಜನೆ

ಲಿವಿಂಗ್ ಟುಗೆದರ್’ ಬೆಟರ್ ಅಂತಾಳೆ ತ್ರಿಶಾ

Pinterest LinkedIn Tumblr

trushಯಾರು ಏನೇ ಹೇಳಲಿ, ನನ್ನ ಸ್ವಂತವಾದ ವೈಯಕ್ತಿಕ ಅಭಿಪ್ರಾಯ ಹೇಳಬೇಕೆಂದರೆ, ನಿಜಕ್ಕೂ ಈ ವಿವಾಹ ಬಂಧನಕ್ಕಿಂತಲೂ ‘ಲಿವಿಂಗ್ ಟುಗೆದರ್’ ಬೆಟರ್ ಕಣ್ರೀ… ಹೀಗೆ ಹೇಳಿದ್ದು ಬೇರೆ ಯಾರೂ ಅಲ್ಲ, ತ್ರಿಷಾ ಎಂಬ ದಕ್ಷಿಣದ ಯಶಸ್ವೀ ನಟಿ.ಯಾವುದೋ ನಿರೀಕ್ಷೆಯಲ್ಲಿ ಮದುವೆ ಮಾಡಿಕೊಳ್ಳುವುದು… ಗಂಡನ ಜತೆ ಬೇಕಿರಲಿ, ಇಲ್ಲದಿರಲಿ ಸಂಸಾರ ನಡೆಸುವುದು ಅಥವಾ ವಿಚ್ಛೇದನ ಪಡೆದುಕೊಳ್ಳುವುದು… ಈ ಎಲ್ಲ ರೇಜಿಕೆಗಿಂತ ಒಳ್ಳೆಯ ಗೆಳೆಯ (ಗೆಳತಿ) ಜತೆ ಲಿವಿಂಗ್ ಟುಗೆದರ್ (ಕೂಡಿ ಬಾಳುವುದು) ಖಂಡಿತಾ ಬೆಟರ್…

ತ್ರಿಷಾ ಕಳೆದೊಂದು ದಶಕದಿಂದ ತೆಲುಗು, ತಮಿಳು, ಮಲಯಾಳಿ ಸೇರಿದಂತೆ ದಕ್ಷಿಣ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದವಳು. ಈವರೆಗೆ 48 ಸಿನಿಮಾಗಳನ್ನು ಮಾಡಿರುವ ತ್ರಿಷಾ ಈಗ ಹಾಲಿ ಸುಂದರ್ ಸಿ. ಮತ್ತು ಕತುಲ್ ಹಾಸನ್‌ರ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾಳೆ. 50ನೆ ಚಿತ್ರ ಸುಂದರ್ ಅವರದೇ ಆಗುತ್ತೋ ಅಥವಾ ಕಮಲ್‌ದೇ ಆಗುತ್ತೋ ಗೊತ್ತಿಲ್ಲ. ಯಾಕೆಂದ್ರೆ ಯಾವುದು ಮೊದಲು ಬಿಡುಗಡೆ ಆಗುತ್ತೆ ಅನ್ನುವುದನ್ನು ಅದು ಅವಲಂಬಿಸಿದೆ.

Write A Comment