ಮನೋರಂಜನೆ

ಬೆಳ್ಳಿ ಪರದೆ ಮೇಲೆಸಾ.ರಾ.ಗೋವಿಂದು ಅವರ ಪುತ್ರ ಅನೂಪ್ ಅಭಿನಯದ ‘ಡವ್’

Pinterest LinkedIn Tumblr

davಬೆಂಗಳೂರು, ಅ.1-ಕನ್ನಡದ ಹೋರಾಟಗಾರ ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರ ಸುಪುತ್ರ ಅನೂಪ್ ಸಾ.ರಾ.ಗೋವಿಂದು ಡವ್ ಚಿತ್ರದ ಮೂಲಕ ಬೆಳ್ಳಿ ಪರದೆ ಮೇಲೆ ಮಿಂಚಲು ಸನ್ನದ್ಧರಾಗಿದ್ದಾರೆ. ಇದೇ 9 ರಿಂದ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿರುವ ಡವ್ ಚಿತ್ರದ  ಪ್ರಚಾರಕ್ಕಾಗಿ ನಿರ್ಮಾಪಕ  ಸಾ.ರಾ.ಗೋವಿಂದು ಹಾಗೂ ಚಿತ್ರತಂಡ ಸೇರಿದಂತೆ ಶೇಷಾದ್ರಿಪುರಂ  ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಅದ್ಧೂರಿ ಚಾಲನೆಯನ್ನು ನೀಡಲಾಯಿತು.

ಚಿತ್ರದ ಪ್ರಮೋಷನ್‌ಗಾಗಿ 2 ತೆರೆದ ವಾಹನದ  ಮೂಲಕ ರಾಜ್ಯಾದ್ಯಂತ 120 ಕಾಲೇಜುಗಳಿಗೆ   ನಟ ಅನೂಪ್, ನಟಿ ಅದಿತಿರಾವ್ ಹಾಗೂ ನಿರ್ದೇಶಕ ಸಂತು   ಪ್ರಯಾಣ ಬೆಳೆಸಿ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರದ ಬಗ್ಗೆ ಮಾಹಿತಿ ನೀಡುವ  ಮೂಲಕ ಚಿತ್ರದ ಪ್ರಚಾರ ಕೈಗೊಳ್ಳಲಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ನಡೆಸಿ ಅವರಿಗೆ ಚಿತ್ರದ ಟೀ ಶರ್ಟ್ ಹಾಗೂ ಬಹುಮಾನಗಳನ್ನೂ ಕೂಡ ನೀಡಲಿದ್ದಾರೆ.

ಬೆಂಗಳೂರು, ಮಂಡ್ಯ, ಮೈಸೂರು ಕಡೆಗೆ ಒಂದು ವಾಹನ ಪ್ರಯಾಣ ಬೆಳೆಸಿದರೆ, ತುಮಕೂರು, ಹಿರಿಯೂರು, ಚಿತ್ರದುರ್ಗ ಹಾಗೂ  ಬಿಜಾಪುರದ ಕಡೆ ಮತ್ತೊಂದು  ತಂಡ ಪಯಣ ಬೆಳೆಸುತ್ತಿದೆ. ಈ ಡವ್ ಚಿತ್ರವನ್ನು  ಬಿ.ಕೆ.ಶ್ರೀನಿವಾಸ್ ರವರು ನಿರ್ಮಿಸಿದ್ದು, ಚಿತ್ರವನ್ನು ಅದ್ಧೂರಿಯಾಗಿ ತೆರೆ ಮೇಲೆ ತರಲು ಸಕಲ ಸಿದ್ಧತೆಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಇಂದೊಂದು ಯೂತ್‌ಫುಲ್ ಸಿನಿಮಾವಾಗಿದ್ದು, ವಿದ್ಯಾರ್ಥಿಗಳ ಗಮನ ಸೆಳೆಯುವ  ಉದ್ದೇಶ ನಮ್ಮದಾಗಿದೆ. ಹಾಗಾಗಿ ಈ ಚಿತ್ರವನ್ನು ಪ್ರತಿಯೊಬ್ಬರೂ ನೋಡಲಿ ಎಂದು ಈ ವಿನೂತನ ಪ್ರಯತ್ನ ಮಾಡಿದ್ದೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

Write A Comment