ಮನೋರಂಜನೆ

ನಾನು ನಿರ್ದೇಶಕನಾಗುವುದಿಲ್ಲ: ಅಕ್ಷಯ್ ಕುಮಾರ್

Pinterest LinkedIn Tumblr

akshyaಬಾಲಿವುಡ್ ನ ಕಿಲಾಡಿ ಅಕ್ಷಯ್ ಕುಮಾರ್ ತಮ್ಮ ಅಭಿನಯದ ಮೂಲಕವೇ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದವರು. ಅಕ್ಷಯ್ ಕುಮಾರ್ ಸಿನಿಮಾ ಅಂದ್ರೆ ಇಂದಿಗೂ ಅದೆಷ್ಟೋ ಯುವಕ ವತಿಯರು ನೋಡದಕ್ಕೆ ಮುಗಿ ಬೀಳ್ತಾರೆ. ಅಕ್ಷಯ್ ಕುಮಾರ್ ಕೇವಲ ನಟನಾಗಿ ಮಾತ್ರವಲ್ಲದೇ ಒಬ್ಬ ನಿರ್ಮಾಪಕನಾಗಿಯೂ ಬಾಲಿವುಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಅಕ್ಕಿಯನ್ನು ನಿರ್ದೇಶಕನ ಸ್ಥಾನದಲ್ಲಿಯೂ ನೋಡಬೇಕು ಅನ್ನೋದು ಅದೆಷ್ಟೋ ಜನರ ಮನದಾಸೆ. ಆದರೆ ಅಕ್ಕಿ ಮಾತ್ರ ನಾನು ನಿರ್ದೇಶಕನಾಗಲ್ಲ ಅಂತಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ಬರೋಬ್ಬರಿ 25 ವರ್ಷಗಳನ್ನು ಪೂರೈಸಿರುವ ಅಕ್ಷಯ್ ನಟನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಕಾಣಿಸಿಕೊಂಡಿದ್ದಾರೆ. ಹರಿ ಓಂ ಎಂಟ್ರೈನ್ ಮೆಂಟ್ ಬ್ಯಾನರ್ ನಡಿಯಲ್ಲಿ ಅಕ್ಕಿ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಅಕ್ಷಯ್ ಕುಮಾರ್ ಬಳಿ ಸಿನಿಮಾ ನಿರ್ದೇಶನ ಮಾಡುತ್ತೀರಾ ಎಂದು ಪ್ರಶ್ನಿಸಿದಕ್ಕೆ ಅಕ್ಕಿ ಇಲ್ಲ ಎಂಬ ಉತ್ತರ ನೀಡಿದ್ದಾರೆ.

ನಾನು ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಒಬ್ಬ ನಟನಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದೇನೆ. ನಿರ್ಮಾಪಕನಾಗಿಯೂ ದುಡಿದಿದ್ದೇನೆ. 25  ವರ್ಷಗಳ ವೃತ್ತಿ ಬದುಕಿನ ಎರಡನ್ನೂ ಉತ್ತಮವಾಗಿ ನಿಭಾಯಿಸಿದ್ದೇನೆ. ಇನ್ಮುಂದೆಯೂ ನಾನು ಇದೇ ಎರಡು ಪಾತ್ರಗಳನ್ನು ನಿರ್ವಹಿಸಲು ಇಷ್ಟಪಡುತ್ತೇನೆ. ಯಾವತ್ತೂ ನಿರ್ದೇಶನದ ಕಡೆಗೆ ಯೋಚಿಸಿಲ್ಲ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

Write A Comment