ಮನೋರಂಜನೆ

ಕ್ರಿಕೆಟಿಗ ಹರ್ಭಜನ್-ಗೀತಾ ಬಾಸ್ರಾ ಅಕ್ಟೋಬರ್ 29ಕ್ಕೆ ಹಸೆಮಣೆಗೆ

Pinterest LinkedIn Tumblr

ಹ಻ರಬಾಲಿವುಡ್ ಅಂಗಳದಲ್ಲಿ ಮತ್ತೊಂದು ಅದ್ಧೂರಿ ವಿವಾಹಕ್ಕೆ ವೇದಿಕೆ ರೆಡಿಯಾಗುತ್ತಿದೆ. ಬಹು ದಿನಗಳಿಂದ ಕಾಯುತ್ತಿದ್ದ ಗೀತಾ ಬಾಸ್ರಾ ಹಾಗೂ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ವಿವಾಹ ದಿನಾಕ ಕೊನೆಗೂ ನಿಗದಿಯಾಗಿದೆ.
ಮುಂದಿನ ತಿಂಗಳು ಅಂದ್ರೆ ಅಕ್ಟೋಬರ್ 29 ರಂದು ಹರ್ಭಜನ್ ಸಿಂಗ್ ಹಾಗೂ ಗೀತಾ ಬಾಸ್ರಾ ಸಾಂಸರಿಕ ಜೀವನಕ್ಕೆ ಕಾಲಿಡಲಿದ್ದಾರೆ. ಹರ್ಭಜನ್ ಸಿಂಗ್ ಹುಟ್ಟೂರು ಜಲಂಧರ್ ನಿಂದ 20 ಕಿ.ಮೀ ದೂರದಲ್ಲಿರುವ  ಪಾಗ್ವಾರಾದ ಹೋಟೆಲ್ ಕ್ಲಬ್ ಕಬಾನಾದಲ್ಲಿ  ವಿವಾಹ ನಡೆಯಲಿದೆ.

ಭಜ್ಜಿ ವಿವಾಹ ಅಂದ ಮೇಲೆ ಕ್ರಿಕೆಟಿಗರು ಹಾಜರಾಗಲ ಬೇಕು. ಅನೇಕ ಕ್ರಿಕೆಟ್ ತಾರೆಯರೂ ಕೂಡ ಮದುವೆಗೆ ಸಾಕ್ಷಿಯಾಗಲಿದ್ದಾರಂತೆ. ಇನ್ನುಳಿದಂತೆ ಗೀತಾ ಬಾಸ್ರಾ ಕಡೆಯಿಂದ ಬಾಲಿವುಡ್ ತಾರೆಯರು ಆಗಮಿಸೋದು ಪಕ್ಕಾ. ಈಗಾಗಲೇ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾದ ಮುಖೇಶಅ ಅಂಬಾನಿ ಹಾಗೂ ನೀತಾ ಅಂಬಾನಿ ಮದುವೆಗೆ ನಾವು ಬರ್ತಿದ್ದೇವೆ ಅಂತಾ ಮುಂಚೆನೇ ಹೇಳಿದ್ದಾರಂತೆ.

Write A Comment