ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ,ಯುವಕರ ಸ್ಫೂರ್ತಿಯ ಚಿಲುಮೆ ಶಹೀದ್ ಭಗತ್ ಸಿಂಗ್ ಕುರಿತಾದ ಚಿತ್ರವೊಂದನ್ನು ಕನ್ನಡದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ.
ದೇಶಪ್ರೇಮಿ ಭಗತ್ ಸಿಂಗ್’ರ ಜೀವನಕಥೆಯ ಈ ಚಿತ್ರಕ್ಕೆ ‘ಕ್ರಾಂತಿವೀರ’ ಎಂದು ಶೀರ್ಷಿಕೆ ಇಡಲಾಗಿದೆ. ಡಾನ್ ಜಯರಾಜ್ ಪುತ್ರ ಅಜಿತ್ ಜಯರಾಜ್ ಕನ್ನಡಲ್ಲಿ ಭಗತ್ ಸಿಂಗ್ ಪಾತ್ರವನ್ನು ಮಾಡಲಿದ್ದಾರೆ. ಈ ಹಿಂದೆ ಅಜಿತ್ ಅಗಮ್ಯ ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು.
‘ಅಲೆ’ ಎಂಬ ಚಿತ್ರ ನಿರ್ದೇಶಿಸಿದ್ದ ಆದತ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್’ರ ಜೀವನಕಥೆಯಾಧಾರಿಸಿದ 7 ಚಿತ್ರಗಳು ಈಗಾಗಲೇ ಬಾಲಿವುಡ್’ನಲ್ಲಿ ತೆರೆಕಂಡಿದೆ.
ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರ ಕೂಡ ಕಾಂತ್ರಿಕಾರಿ ವೀರನ ಕಥೆ ಹೊಂದಿದೆ ಎನ್ನಲಾಗಿದೆ. ಆದರೂ ಇದೇ ಮೊದಲ ಬಾರಿ ಕನ್ನಡದಲ್ಲಿ ಶಹೀದ್ ಭಗತ್ ಸಿಂಗ್’ರ ಕುರಿತಾದ ಸಂಪೂರ್ಣ ಚಿತ್ರ ಸೆಟ್ಟೇರಿರುವುದು ಸಂತಸದ ವಿಚಾರ.
-ಕಪ್ಪು ಮೂಗುತ್ತಿ
-ಉದಯವಾಣಿ