ಮನೋರಂಜನೆ

ವಿವಾಹ ವಿಚ್ಛೇದನವನ್ನು ಘೋಷಿಸಿದ ಬಾಲಿವುಡ್ ಕೊಂಕಣಾ, ರಣವೀರ್ ಜೋಡಿ

Pinterest LinkedIn Tumblr

Konkona, Ranvir

ಮುಂಬೈ: ಕನ್ನಡ ನಟ ಸುದೀಪ್ ತಮ್ಮ ವೈವಾಹಿಕ ಬಂಧನದಿಂದ ಹೊರಬಂದ ವಿಷಯ ಇನ್ನೂ ಹಸಿಯಾಗಿರುವಾಗಲೇ ಬಾಲಿವುಡ್ ಜೋಡಿಯೊಂದು ತಮ್ಮ ವಿವಾಹ ವಿಚ್ಛೇದನವನ್ನು ಘೋಷಿಸಿದೆ.

ಜನಪ್ರಿಯ ನಟರಾದ ಕೊಂಕಣಾ ಸೇನ್ ಶರ್ಮಾ ಮತ್ತು ರಣವೀರ್ ಶೋರೆ ಸೋಮವಾರ ತಾವು ಬೇರೆಯಾಗುತ್ತಿರುವ್ದನ್ನು ಘೋಷಿಸಿದ್ದಾರೆ. ಐದು ವರ್ಷದ ಹಿಂದೆಯಷ್ಟೇ ಇವರು ವಿವಾಹವಾಗಿದ್ದರು.

ಬಹಳ ದಿನಗಳಿಂದ ಇವರ ವೈವಾಹಿಕ ಜೀವನದಲ್ಲಿ ಒಡಕು ಮೂಡಿದೆ ಎಂಬ ವದಂತಿಗಳಿದ್ದವು. ಈ ಜೋಡಿಗೆ ಹರೂನ್ ಎಂಬ ನಾಲ್ಕು ವರ್ಷದ ಮಗುವಿದ್ದು, ಆ ಮಗುವನ್ನು ಇಬ್ಬರೂ ಜೊತೆಯಾಗಿ ನೋಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

“ರಣವೀರ್ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ, ಆದರೆ ಗೆಳೆಯರಾಗಿ ಮುಂದುವರೆಯಲಿದ್ದು ನಮ್ಮ ಮಗನನ್ನು ಒಟ್ಟಿಗೆ ನೋಡಿಕೊಳ್ಳಲಿದ್ದೇವೆ, ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು” ಎಂದು ಹಿರಿಯ ನಟಿ ಅಪರ್ಣ ಸೇನ್ ಅವರ ಪುತ್ರಿ ಕೊಂಕಣಾ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ರಣವೀರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಘೋಷಣೆ ಮಾಡಿದ್ದಾರೆ. “ಕೊಂಕಣಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ, ಆದರೆ ಗೆಳೆಯರಾಗಿ ಮುಂದುವರೆಯಲಿದ್ದು ನಮ್ಮ ಮಗನನ್ನು ಒಟ್ಟಿಗೆ ನೋಡಿಕೊಳ್ಳಲಿದ್ದೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು” ಎಂದು ಅವರು ಬರೆದಿದ್ದಾರೆ. ಈ ಜೋಡಿ ‘ಗುರ್ ಹರಿ ದಸ್ತಾನ್:ದ ಫ್ರೀಡಂ ಫೈಲ್’ ಸಿನೆಮಾದಲ್ಲಿ ನಟಿಸಿದ್ದರು.

Write A Comment