ಮನೋರಂಜನೆ

ಈ ಸಿನಿಮಾ ನೋಡಿ…ಗುಂಡಿಗೆ ಗಟ್ಟಿ ಇದೆ ಅಂತ ಸಾಬೀತಾದ್ರೆ 5 ಲಕ್ಷ ರೂ.!

Pinterest LinkedIn Tumblr

nayanaಸಿನೆಮಾ ನೋಡಲು ಕ್ಯೂ ನಿಂತು ದುಡ್ಡು ಕೊಡೋರು ನಾವು…ಅದೇ ಚಿತ್ರ ನೋಡಿದಕ್ಕೆ ನಿರ್ಮಾಪಕ ದುಡ್ಡು ಕೊಟ್ರೆ…!
ಹೌದು ಇಂತಹದೊಂದು ಆಫರ್ ಕಾಲಿವುಡ್ ಚಿತ್ರರಂಗದಿಂದ ಬಂದಿದೆ.

ಸೌತ್ ಸುಂದರಿ ನಯನತಾರ ಅಭಿನಯದ ಮಯೂರಿ ಚಿತ್ರವನ್ನು ನೀವು ನೋಡಿ 5 ಲಕ್ಷ ಗೆಲ್ಲಬಹುದು ಎಂದು ಚಿತ್ರದ ನಿರ್ಮಾಪಕ ಸಿನಿರಸಿಕರಿಗೆ ಬಂಪರ್ ಆಫರ್ ನೀಡಿದ್ದಾರೆ.

ಆದರೆ ಈ ಚಿತ್ರವು ಹಾರರ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು ಚಿತ್ರ ನೋಡಿ ನಿಮ್ಮ ಗುಂಡಿಗೆ ಗಟ್ಟಿಯಿದೆ ಎಂದು ಸಾಬೀತಾದರೆ 5 ಲಕ್ಷ ರೂ. ನಿಮ್ಮ ಕೈ ಸೇರುತ್ತದೆ ಅಂದಿದ್ದಾರೆ ನಿರ್ಮಾಪಕ.

ಮಯೂರಿ ಚಿತ್ರವು ತಮಿಳು-ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದ್ದು ಈ ಚಿತ್ರವು ನಟಿ ನಯನತಾರ ಅಭಿನಯದ ಅತ್ಯುತ್ತಮ ಚಿತ್ರ ಎಂದಿದ್ದಾರೆ.

ಮಹಿಳಾ ಕೇಂದ್ರಿತ ಥ್ರಿಲ್ಲರ್ ಚಿತ್ರದಲ್ಲಿ ಸೂಪರ್ ಬೆಡಗಿ ನಯನತಾರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ ಬಾಲಿವುಡ್ ಚಿತ್ರ ಫೂಂಕ್2  ನೋಡಿ ಭಯಪಡದವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ರಾಮ್ ಗೋಪಾಲ್ ವರ್ಮಾ ಘೋಷಿಸಿದ್ದರು.

ಈಗ ಮಯೂರಿ ಚಿತ್ರದ ನಿರ್ಮಾಪಕರು ಕೂಡ ಅದೇ ರೀತಿಯ ಪ್ರಸ್ತಾವನೆಯನ್ನು ಸಿನಿಪ್ರಿಯರ ಮುಂದಿಟ್ಟಿದ್ದಾರೆ. ಈ ಚಿತ್ರವು ಇದೇ ಸೆಪ್ಟಂಬರ್  17ರಂದು ತೆರೆಗೆ ಬರಲಿದ್ದು ನಿರ್ಭೀತ ಕೆಚ್ಚದೆಯ ವೀರರು 5 ಲಕ್ಷ ರೂ. ಗೆಲ್ಲಲು ರೆಡಿಯಾಗ್ಬಹುದು.
-ಕಪ್ಪು ಮೂಗುತ್ತಿ
-ಉದಯವಾಣಿ

Write A Comment