ಮನೋರಂಜನೆ

ಪೇಸ್-ಹಿಂಗಿಸ್ ಮಡಿಲಿಗೆ ಯುಎಸ್ ಓಪನ್ ಮಿಶ್ರ ಡಬಲ್ಸ್ ಕಿರೀಟ

Pinterest LinkedIn Tumblr

US Open Tennis

ನ್ಯೂಯಾರ್ಕ್: ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಲಿಯಾಂಡರ್‌ ಪೇಸ್‌ ಹಾಗೂ ಸ್ವಿಡ್ಜರ್ಲೆಂಡಿನ ಮಾರ್ಟಿನಾ ಹಿಂಗಿಸ್‌ ಜೋಡಿಯು 2015ನೇ ಸಾಲಿನ ಯುಎಸ್‌ ಓಪನ್‌ನ ಮಿಶ್ರ ಡಬಲ್ಸ್‌ ಪ್ರಶಸ್ತಿಯನ್ನು ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಅವರು, ಅಮೆರಿಕಾದ ಬೆಥನಿ ಮ್ಯಾಟೆಕ್‌ ಸ್ಯಾಂಡ್ಸ್‌ ಹಾಗೂ ಸ್ಯಾಮ್‌ ಕ್ವೆರಿ ಜೋಡಿಯನ್ನು 6-4, 3-6 ಮತ್ತು 10-7 ರ ಅಂತರದಲ್ಲಿ ಮಣಿಸಿದೆ.

42 ವರ್ಷದ ಲಿಯಾಂಡರ್ ಪೇಸ್ ಮಿಶ್ರ ಡಬಲ್ಸ್ ನಲ್ಲಿ 9 ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಮೂಲಕ ತಮ್ಮ ಮಾಜಿ ಜೋಡಿ ಮಹೇಶ್ ಭೂಪತಿಯವರ 8 ಗ್ರ್ಯಾಂಡ್ ಸ್ಲಾಮ್ ನ್ನು ಹಿಂದಿಕ್ಕಿದ್ದಾರೆ.

ಮೊದಲ ಸೆಟ್ ಅನ್ನು 6-4 ಅಂತರದಲ್ಲಿ ಜಯಿಸಿದ್ದ ಪೇಸ್-ಹಿಂಗಿಸ್ ಜೋಡಿಯು, ಎರಡನೇ ಸೆಟಿನಲ್ಲಿ 3-6 ಅಂತರದಲ್ಲಿ ಎದುರಾಳಿಗಳಿಗೆ ಬಿಟ್ಟುಕೊಟ್ಟಾಗ ಕೊಂಚ ಆತಂಕದ ಕ್ಷಣ ಎದುರಾಗಿತ್ತು. ಆದರೆ ಅಂತಿಮ ಹಣಾಹಣಿಯಲ್ಲಿ ಪೇಸ್-ಹಿಂಗಿಸ್ ಜೋಡಿಯು ಬೆಥನಿ-ಸ್ಯಾಮ್ ಜೋಡಿಯನ್ನು 10-7 ಅಂತರದ ಭಾರೀ ಹೋರಾಟದ ಟೈಬ್ರೇಕ್ ಮೂಲಕ ಸೋಲಿಸಿದಾಗ, ಪೇಸ್-ಹಿಂಗಿಸ್ ಜೋಡಿಗೆ ವಿಜಯಮಾಲೆ ಒಲಿಯಿತು.

ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ ಹಾಗೂ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ನಲ್ಲೂ ಪೇಸ್‌ ಮತ್ತು ಹಿಂಗಿಸ್‌ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದರು.ಮಹಿಳಾ ಡಬಲ್ಸ್ ಫೈನಲ್ ತಲುಪಿರುವ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಸಹ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.

Write A Comment