ಮನೋರಂಜನೆ

ನೀವೇಕೆ ಬೇರೆಯವರ ಕಿಸ್ ನೋಡಲು ಬಯಸುತ್ತೀರಿ ?- ನಟ ಸಲ್ಮಾನ್ ಖಾನ್

Pinterest LinkedIn Tumblr

salman88ಬಾಲಿವುಡ್’ನ ಹೀರೊ ಚಿತ್ರದಲ್ಲಿರುವ ಕಿಸ್ಸಿಂಗ್ ಸೀನ್’ಗಳನ್ನು ಎಡಿಟ್ ಮಾಡಿಸಿರುವ ಸಲ್ಲು ಮಿಯಾ ಈ ಚಿತ್ರವನ್ನು ಮನೆ ಮಂದಿ ಜೊತೆಯಾಗಿ ಕೂತು ನೋಡಬಹುದು ಎಂಬ ಭರವಸೆ ನೀಡಿದ್ದಾರೆ.

ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಹಾಗೂ ಆದಿತ್ಯ ಪಾಂಚೋಲಿ ಪುತ್ರ ಸೂರಜ್ ಜೋಡಿಗಳಾಗಿ ನಟಿಸಿರುವ ಹೀರೊ ಚಿತ್ರದಲ್ಲಿರುವ ಚುಂಬನ ದೃಶ್ಯಗಳನ್ನು ತೆಗೆದು ಹಾಕುವಂತೆ ಚಿತ್ರದ ನಿರ್ಮಾಪಕ/ನಟ ಸಲ್ಮಾನ್ ಖಾನ್ ನಿರ್ದೇಶಕ ನಿಖಿಲ್ ಅಡ್ವಾಣಿಗೆ ತಿಳಿಸಿದ್ದರು.

ಚಿತ್ರದ ಪ್ರಚಾರದ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗೆ ಸಲ್ಲು ಮಿಯಾ ‘ನೀವೇಕೆ ಇತರರ ಚುಂಬನ ದೃಶ್ಯಗಳನ್ನು ನೋಡಲು ಬಯಸುತ್ತೀರಿ, ನೀವೇ ಚುಂಬಿಸಿ’ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಹಮ್ ಆಪ್ ಕೆ ಕೌನ್ ಚಿತ್ರವು ಅತ್ಯುತ್ತಮ ಕಥೆ ಮತ್ತು ಸಂಗೀತದಿಂದ ಸೂಪರ್ ಹಿಟ್ ಆಗಿದ್ದು ಅಧರ ಚುಂಬನದ ಅವಶ್ಯಕತೆ ಚಿತ್ರಕ್ಕೆ ಬೇಕಾಗಿಲ್ಲ ಎಂದು ಇದೇ ವೇಳೆ ತಿಳಿಸಿದರು.

ಹೀರೊ ಚಿತ್ರದಲ್ಲಿ ಟೈಟಲ್ ಗೀತೆಯನ್ನು ಹಾಡಿರುವ ಸಲ್ಮಾನ್ ಭಾಯಿಜಾನ್ ಚಿತ್ರವನ್ನು ಮುಂದಿನ ಶುಕ್ರವಾರದಂದು ಬಿಡುಗಡೆ ಮಾಡಲಿದ್ದಾರೆ.
-ಕಪ್ಪು ಮೂಗುತ್ತಿ
-ಉದಯವಾಣಿ

Write A Comment