ಮನೋರಂಜನೆ

‘ಭಜರಂಗಿ ಭಾಯಿಜಾನ್’ ನಿರ್ದೇಶಕನಿಗೆ ಸಲ್ಮಾನ್ ಖಾನ್’ರ ವಿಶೇಷ ಗಿಫ್ಟ್

Pinterest LinkedIn Tumblr

ೊಮಗಭಜರಂಗಿ ಭಾಯಿಜಾನ್ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಚಿತ್ರದ ನಿರ್ದೇಶಕ ಕಬೀರ್ ಖಾನ್’ಗೆ ವಿಶೇಷ ಗಿಫ್ಟ್’ವೊಂದನ್ನು ನೀಡಿದ್ದಾರೆ.

ಸಲ್ಲು ಮಿಯಾ ಅತ್ಯುತ್ತಮ ನಟನಷ್ಟೇ ಅಲ್ಲ, ಉತ್ತಮ ಚಿತ್ರ ಕಲೆಗಾರ ಎಂಬುದು ಬಿಟೌನ್’ನಲ್ಲಿ ಎಲ್ಲರಿಗೂ ಗೊತ್ತಿರುವ ಸಂಗತಿ.

ಈಗ ದಬಂಗ್ ಖಾನ್ ತಮ್ಮ ಪ್ರೀತಿಯ ನಿರ್ದೇಶಕ ಕಬೀರ್ ಖಾನ್’ಗೆ ತಾವೇ ಬಿಡಿಸಿದ ವರ್ಣಚಿತ್ರದ ಕಲಾತ್ಮಕ ಕೊಡುಗೆಯನ್ನು ನೀಡಿದ್ದಾರೆ.

ಹವ್ಯಾಸಿ ಕಲಾವಿದ ಸಲ್ಮಾನ್ ಖಾನ್ ಈ ಚಿತ್ರಕಲೆಯ ಮೂಲಕ ಭಜರಂಗಿ ಭಾಯಿಜಾನ್ ನಿರ್ದೇಶಕರಿಗೆ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.

ಏಕ್ ಥ ಟೈಗರ್ ಚಿತ್ರದ ಮೂಲಕ ಸಲ್ಲು ಜೊತೆಗೂಡಿರುವ ನಿರ್ದೇಶಕ ಕಬೀರ್ ಖಾನ್ -”ನನ್ನ ಗೆಳೆಯ, ನನ್ನ ನಟ, ನನ್ನ ನಿರ್ಮಾಪಕನಿಂದ ಅತ್ಯುತ್ತಮ ಗಿಫ್ಟ್ ಪಡೆದಿರುವುದಾಗಿ” ತಮ್ಮ ಸಾಮಜಿಕ ಖಾತೆಯಲ್ಲಿ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಸದ್ಯ ಭಜರಂಗಿ ಭಾಯಿಜಾನ್ ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಭಾರತೀಯ ಚಿತ್ರರಂಗದಲ್ಲೇ  ಹೊಸ ದಾಖಲೆ ಬರೆಯುವತ್ತಾ ದಾಪುಗಾಲಿಟ್ಟಿದೆ.
-ಕಪ್ಪು ಮೂಗುತ್ತಿ
-ಉದಯವಾಣಿ

Write A Comment