ಮನೋರಂಜನೆ

ಧನುಷ್‌ ಜೊತೆ ನಟಿಸಲು ಹಿಂದೇಟು ಹಾಕಿದ ನಟಿ ವಿದ್ಯಾಬಾಲನ್

Pinterest LinkedIn Tumblr

Vidya-Balanvidhy

ತಮಿಳು ಮೂಲದ ವಿದ್ಯಾಬಾಲನ್ ಇಂದು ಬಾಲಿವುಡ್‌ನ ಬಹು ಬೇಡಿಕೆಯ ನಟಿ. ಇದೀಗ ಸಾಕಷ್ಟು ಚಿತ್ರಗಳು ಆಕೆಯ ಕೈಯಲ್ಲಿವೆ. ಈ ನಡುವೆ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಅಭಿನಯದ ಹೊಸ ಚಿತ್ರವೊಂದು ಸದ್ಯದಲ್ಲೇ ಸೆಟ್ಟೇರಲಿದೆ.

ಈ ಚಿತ್ರಕ್ಕೆ ನಾಯಕಿಯಾಗಿ ವಿದ್ಯಾ ನಟಿಸಲಿದ್ದಾರೆಂದು ಚಿತ್ರದ ನಿರ್ದೇಶಕ ಆರ್.ಎಸ್.ದೊರೈ ಸೆಂಥಿಲ್‌ಕುಮಾರ್ ಪ್ರಕಟಿಸಿದ್ದರು. ಆದರೆ, ವಿದ್ಯಾಬಾಲನ್ ಆ ಚಿತ್ರದಲ್ಲಿ ನಟಿಸುವುದು ಅನುಮಾನ ಎಂಬ ಮಾತುಗಳು ಇದೀಗ ಕೇಳಿಬಂದಿವೆ.

ವಿದ್ಯಾಬಾಲನ್ ಅವರನ್ನು ಈ ಚಿತ್ರದಲ್ಲಿ ನಟಿಸುವಂತೆ ನಿರ್ಮಾಪಕರು ಭೇಟಿ ನೀಡಿ ಮಾತುಕತೆ ನಡೆಸಿದ್ದು ನಿಜ. ಆದರೆ, ಆಕೆಯಿಂದ ಈ ತನಕ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹಾಗಾಗಿ ಸದ್ಯಕ್ಕೆ ಈ ವಿಷಯ ತೆರೆ ಮರೆಗೆ ಸರಿದಿದೆ. ಈ ನಡುವೆ ಮತ್ತೊಬ್ಬ ನಾಯಕಿಯ ಹುಡುಕಾಟಕ್ಕೂ ಚಿತ್ರತಂಡ ಮುಂದಾಗಿದೆ.ಈ ಚಿತ್ರದಲ್ಲಿ ಧನುಷ್ ಪ್ರಪ್ರಥಮ ಬಾರಿಗೆ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ , ಧನುಷ್ ಅಭಿನಯದ ಮೂರನೆ ಚಿತ್ರವನ್ನು ಸೆಂಥಿಲ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.

Write A Comment