ರಿಯಾಲಿಟಿ ಷೋ ಗಳ ಸ್ಟಾರ್ ಕಿಮ್ ಕರ್ದಾಶಿಯನ್ ಈಗ ಗರ್ಭಿಣಿಯಾಗಿದ್ದಾಳಂತೆ. ತನ್ನ ಬೆತ್ತಲೆ ಚಿತ್ರಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕುತ್ತಲೇ ಸಾಕಷ್ಟು ಫೇಮಸ್ ಆಗಿರುವ ಈ ನಟಿ ತಾನು ಗರ್ಭಿಣಿಯಾಗಿದ್ದೇನೆಂದು ಸಾಬೀತುಪಡಿಸಲು ಮಾಡಿದದ್ದಾರೂ ಏನು ನೋಡಿ.
ನಟಿಯರು ಸಾಮಾನ್ಯವಾಗಿ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಗುಪ್ತವಾಗಿ ಇಡಲು ಬಯಸುವುದೇ ಹೆಚ್ಚು. ಆದರೆ ಇದಕ್ಕೆ ವ್ಯತಿರಿಕ್ತವಾಗಿ 34 ವರ್ಷದ ಕಿಮ್ ಕರ್ದಾಶಿಯನ್ ತಾವು ಬೆತ್ತಲಾದ ವೇಳೆ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕುವ ಮೂಲಕ ತಾವು ಗರ್ಭಿಣಿಯಾಗಿದ್ದೇನೆಂದು ಈಗಲಾದರೂ ಗೊತ್ತಾಯಿತಾ ಎಂದಿದ್ದಾರೆ. ಅಲ್ಲದೇ ದೇವರಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.
ಅಷ್ಟಕ್ಕೂ ಆಕೆ ಇದನ್ನು ಸಾಬೀತುಪಡಿಸಲು ಮುಂದಾಗಿದ್ದಕ್ಕೆ ಕಾರಣವಾಗಿದ್ದಾದರೂ ಏನೆಂದರೆ, ಕಿಮ್ ಕರ್ದಾಶಿಯನ್ ದಪ್ಪಗಾಗಿದ್ದಾಳೆ ಎಂದೆಲ್ಲಾ ಮಾತನಾಡಿಕೊಳ್ಳಲಾಗುತ್ತಿತ್ತಂತೆ. ಇಲ್ಲ ತಾನು ಗರ್ಭಿಣಿಯಾಗಿರುವ ಕಾರಣಕ್ಕೆ ದಪ್ಪಗಾಗಿದ್ದೇನೆಂದು ಹೇಳಿದರೂ ಯಾರೂ ನಂಬಲು ತಯಾರಿರಲಿಲ್ಲವಂತೆ. ಹಾಗಾಗಿ ಬೇರೆ ದಾರಿ ಇಲ್ಲದೆ ಕಿಮ್ ಕರ್ದಾಶಿಯನ್ ಬೆತ್ತಲೆ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾಳೆ. ಅಂದ ಹಾಗೇ ಕಿಮ್ ಕರ್ದಾಶಿಯನ್ ಈಗ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.