ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ‘ರಂಗಿತರಂಗ’ ಇದೀಗ ಅಮೆರಿಕಾದಲ್ಲಿಯೂ ಸಹ ಪ್ರದರ್ಶನ ಕಾಣಲು ಸಜ್ಜಾಗಿದೆ.
ಹೌದು. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಡಿಮೆ ಬಜೆಟ್‌ನಲ್ಲಿ ತಯಾರಾಗಿರುವ ರಂಗಿತರಂಗ’ ಚಿತ್ರವು ಬಿಡುಗಡೆಯಾದ ಐದು ವಾರಗಳಲ್ಲಿ ಪರಭಾಷಾ ಚಿತ್ರಗಳ ಅಬ್ಬರದಲ್ಲಿಯೂ ಸಹ ಭಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದು ಅಮೇರಿಕಾದ ಫೀನಿಕ್ಸ್, ಸ್ಯಾನ್ ಜೋಸ್, ಲಾಸ್ ಆ್ಯಂಜಲೀಸ್, ಡೆನ್ವರ್, ಮ್ಯಾಂಚೆಸ್ಟರ್, ಅಟ್ಲಾಂಟ, ಚಿಕಾಗೋ, ಬೋಸ್ಟನ್, ಡೆಟ್ರಾಯ್, ಡಲ್ಲಾಸ್, ವರ್ಜೀನಿಯಾ, ಸಿಯಾಟಲ್, ಹೌಸ್ಟನ್ ಸೇರಿದಂತೆ 35 ನಗರಗಳಲ್ಲಿ ಇದೇ 13ರಂದು ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಇಲ್ಲಿನ ಈ ಎಲ್ಲ ಚಿತ್ರಮಂದಿರಗಳಲ್ಲೂ ಸಬ್‌ಟೈಟಲ್‌ನೊಂದಿಗೆ ಚಿತ್ರ ಪ್ರದರ್ಶನವಾಗುತ್ತಿದ್ದು ಅಮೇರಿಕಾದಲ್ಲಿ ಆಗಸ್ಟ್ 13ಕ್ಕೆ ಬಿಡುಗಡೆಯಾದರೆ, ಇದೇ ತಿಂಗಳ 23ಕ್ಕೆ ಲಂಡನ್‌ನಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.