ಮನೋರಂಜನೆ

‘ಬಾಹುಬಲಿ’ ಸಿನಿಮಾವನ್ನು ಮನಸಾರೆ ಕೊಂಡಾಡಿದ ಶಾರುಕ್ ಖಾನ್

Pinterest LinkedIn Tumblr

srk-baahubali

ಎಸ್ ಎಸ್ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಲನಚಿತ್ರಕ್ಕೆ ತಲೆ ಬಾಗಿರುವ ಬಾಲಿವುಡ್ ತಾರೆಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ ಬಾಲಿವುಡ್ ಬಾದಶಃ ಶಾರುಕ್ ಖಾನ್. ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಸಿನೆಮಾವನ್ನು ಶಾರುಕ್ ಮನಸಾರೆ ಪ್ರಶಂಸಿಸಿದ್ದಾರೆ. ಈ ಹಿಂದೆ ಅಮಿತಾಬ್ ಬಚ್ಚನ್, ರಿಷಿ ಕಪೂರ್ ಮತ್ತು ಸಲ್ಮಾನ್ ಖಾನ್ ಬಾಹುಬಲಿಗೆ ಮನಸೋತಿದ್ದರು.

೪೯ ವರ್ಷದ ‘ಚೆನ್ನೈ ಎಕ್ಸ್ಪ್ರೆಸ್’ ನಟ ಬಾಹುಬಲಿಯ ಬಗ್ಗೆ ಟ್ವೀಟ್ ಮಾಡಿದ್ದು ‘ಸ್ಪೂರ್ತಿದಾಯಕ’ ಎಂದಿದ್ದಾರೆ. “ಬಾಹುಬಲಿ ಕಷ್ಟ ಪಟ್ಟು ದುಡಿದು ಮಾಡಿರುವ ಸಿನೆಮಾ. ಇದು ನೀಡಿದ ಸ್ಫೂರ್ತಿಗೆ, ಚಲನಚಿತ್ರದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳು. ದಾಪುಗಾಲು ಇಟ್ಟರಷ್ಟೇ ನೀವು ಆಕಾಶಕ್ಕೆ ಜಿಗಿಯಬಹುದು” ಎಂದು ಬರೆದಿದ್ದಾರೆ.

ಇತ್ತೀಚಿಗೆ ಬಾಹುಬಲಿಯ ಕಟ್ಟಾ ಅಭಿಮಾನಿಗಳು ಸಿನೆಮಾದ ಬಗ್ಗೆ ಖಾನ್ ಅವರ ಮೌನವನ್ನು ಪ್ರಶ್ನಿಸಿದ್ದರು ಹಾಗು ಅವರಲ್ಲಿ ಕೆಲವರಂತೂ ಬಾಹುಬಲಿ ಯಶಸ್ಸಿನಿಂದ ಶಾರುಕ್ ಅವರಿಗೆ ಹೊಟ್ಟೆಕಿಚ್ಚಾಗಿದೆ ಎಂದು ಕೂಡ ಜರಿದಿದ್ದರು. ಈಗ ಅವರೆಲ್ಲರಿಗೂ ತಮ್ಮ ಸರಳ ಟ್ವೀಟ್ ಮೂಲಕ ಎಸ್ ಆರ್ ಕೆ ಉತ್ತರಿಸಿದ್ದಾರೆ.

ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಈ ಸಿನೆಮಾದಲ್ಲಿ ಪ್ರಭಾಸ್, ತಮನ್ನ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಹುಬಲಿ ಎರಡನೇ ಭಾಗ ೨೦೧೬ರಲ್ಲಿ ತೆರೆ ಕಾಣಲಿದೆ.

Write A Comment