ಮನೋರಂಜನೆ

ತಾಯಿಯ ತಕರಾರಿನ ನಡುವೆಯೂ ಪ್ರಿಯಕರನನ್ನು ಬಿಡಲೊಲ್ಲೆ ಅಂತಾಳೆ ಈ ನಟಿ

Pinterest LinkedIn Tumblr

9642359551-bips-karanಈಗಾಗಲೇ ಎರಡು ಬಾರಿ ವಿಚ್ಚೇದನ ಪಡೆದಿರುವ ಬಾಲಿವುಡ್ ನಟನ ಜೊತೆ ತಮ್ಮ ಪುತ್ರಿ ರೋಮ್ಯಾನ್ಸ್ ಮಾಡುತ್ತಿರುವುದಕ್ಕೆ ತಾಯಿ ತಕರಾರು ಎತ್ತಿದರೂ ಅದಕ್ಕೆ ಕ್ಯಾರೇ ಎನ್ನದ ಬಾಲಿವುಡ್ ನಟಿ ಈಗ ಮಾಲ್ಡೀವ್ಸ್ ನಲ್ಲಿ ಆತನೊಂದಿಗೆ ಕಾಲ ಕಳೆಯುತ್ತಿದ್ದಾರಂತೆ.

ಈ ಮೊದಲು ಜಾನ್ ಅಬ್ರಹಾಂ ಜೊತೆ ನಿಕಟ ಸಂಬಂಧ ಹೊಂದಿದ್ದ ಬಿಪಾಷಾ ಬಸು ಬಳಿಕ ಜಾನ್ ಗೆ ಬೈ ಬೈ ಹೇಳಿದ್ದರು. ನಂತರ ಜಾನ್ ಅಬ್ರಹಾಂ ಬೇರೊಬ್ಬರೊಂದಿಗೆ ವಿವಾಹವಾಗಿ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. ಜಾನ್ ಅಬ್ರಹಾಂ ನನ್ನು ತೊರೆದ ಬಳಿಕ ಒಂಟಿಯಾಗಿರುವುದು ಬೋರೇ ಬೋರು ಅನ್ನುತ್ತಿದ್ದ ಬಿಪಾಷಾ ಈಗ ಜೋಡಿಯನ್ನು ಹುಡುಕಿಕೊಂಡಿದ್ದಾರೆ.

‘ಅಲೋನ್’ ಚಿತ್ರದಲ್ಲಿ ತಮ್ಮೊಂದಿಗೆ ನಟಿಸಿದ್ದ ಕರಣ್ ಸಿಂಗ್ ಗ್ರೋವರ್ ಜೊತೆ ನಿಕಟವಾಗಿರುವ ಬಿಪಾಷಾ, ಮುಂಬೈನ ಲೇಟ್ ನೈಟ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದರು. ಬಾಲಿವುಡ್ ನಲ್ಲಿ ಪ್ಲೇ ಬಾಯ್ ಇಮೇಜ್ ಹೊಂದಿರುವ ಕರಣ್ ಸಿಂಗ್ ಜೊತೆ ಮಗಳು ಸುತ್ತಾಡುತ್ತಿರುವುದಕ್ಕೆ ಬಿಪಾಷಾ ತಾಯಿ ಸಿಡಿಮಿಡಿ ಮಾಡುತ್ತಿದ್ದರೂ ಅದನ್ನು ಲೆಕ್ಕಿಸದ ಬಿಪಾಷಾ ಈಗ ಕರಣ್ ಜೊತೆ ಮಾಲ್ಡೀವ್ಸ್ ನಲ್ಲಿ ಕಾಲ ಕಳೆಯುತ್ತಿದ್ದಾರಂತೆ. ಇವರಿಬ್ಬರು ಜೊತೆಯಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಈಗ ಅಪ್ ಲೋಡ್ ಮಾಡಲಾಗಿದೆ.

Write A Comment