ಮಾಜಿ ಪೋರ್ನ್ ಸ್ಟಾರ್ ಕಂ ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್, ಅಭಿಮಾನಿಗಳಿಗೊಂದು ಶಾಕ್ ಸುದ್ದಿ ಕೊಟ್ಟಿದ್ದಾರೆ. ಪಡ್ಡೆ ಹುಡುಗರು ಈ ಸುದ್ದಿ ಕೇಳಿ ಪಾಪ ಬೆಚ್ಚಿ ಬೀಳಬಹುದು. ಇನ್ನು ಕೆಲವರು ಹೀಗೂ ಉಂಟೆ! ಎಂದು ಅಚ್ಚರಿ ವ್ಯಕ್ತಪಡಿಸಬಹುದು. ಒಟ್ಟಿನಲ್ಲಿ ಸನ್ನಿ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ನಿರ್ಧಾರ ಸರಿಯಾಗಿದೆ ಎನ್ನುವಂತಿದ್ದಾಳೆ.
ಇಷ್ಟಕ್ಕೂ ಸನ್ನಿಯ ಈ ಶಾಕ್ ಸುದ್ದಿಯಾದ್ರು ಏನು ಅಂತೀರಾ? ಇನ್ನುಮುಂದೆ ತೀರಾ ಕಡಿಮೆ ಬಟ್ಟೆ ತೊಟ್ಟು ‘ಅಂಥ’ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುವ ಪರಂಪರೆಗೆ ಸನ್ನಿ ವಿರಾಮ ಹಾಕುತ್ತಿದ್ದಾಳಂತೆ. ಹೌದು, ಈಗಷ್ಟೇ ಬಾಲಿವುಡ್ ಅಂಗಳದಿಂದ ಈ ಸುದ್ದಿ ಹೊರ ಬಿದ್ದಿದ್ದು, ನಟಿ ಸನ್ನಿ ಲಿಯೋನ್‌ರನ್ನು ಇನ್ನು ಮುಂದೆ ಪಡ್ಡೆಗಳು ತಾವು ಇಷ್ಟಪಟ್ಟಂತೆ ನೋಡಲು ಸಾಧ್ಯವಿಲ್ಲ! ಆದರೆ ಸನ್ನಿಗೆ ಇದ್ದಕ್ಕಿದ್ದಂತೆ ಈ ಗೌರಮ್ಮನ ಕನಸು ಬಿದ್ದಿರುವುದು ಕೂಡ ಯಾಕೆ? ಎನ್ನುವ ಕುತೂಹಲ ಕೂಡ ಸದ್ಯಕ್ಕೆ ಸದ್ದು ಮಾಡುತ್ತಿದೆ.
ಏನೇ ಆಗಲಿ ತಾನು ಗೌರಮ್ಮ ಎನ್ನುವ ಮೂಲಕ ಬೆತ್ತಲೆ ಸಂಸ್ಕೃತಿಗೆ ಬ್ರೇಕ್ ಹಾಕುವುದಕ್ಕೆ ಹೊರಟಿದ್ದಾಳೆ ಸನ್ನಿ. ಹೀಗಾಗಿ ಇನ್ನೇನಿದ್ದರೂ ಮೈ ತುಂಬಾ ಬಟ್ಟೆ ತೊಡುವಂಥ ಗೌರಮ್ಮನ ಪಾತ್ರಗಳಲ್ಲಿಯೇ ತಾನು ಅಭಿನಯಿಸುವುದಕ್ಕೆ ಯೋಜನೆ ರೂಪಿಸಿದ್ದಾಳೆ ಈಕೆ. ಕಳೆದ ಒಂದು ವಾರದಿಂದ ಬಾಲಿವುಡ್ ಅಂಗಳದಲ್ಲಿ ಸನ್ನಿಯ ಈ ಹೊಸ ನಿರ್ಧಾರದ್ದೇ ಗುಸುಗುಸು. ಅಂದರೆ ಶೃಂಗಾರಗಳನ್ನು ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಗುವುದಿಲ್ಲ.
ಹೌದು, ನಟಿ ಸನ್ನಿ ಲಿಯೋನ್‌ಗೆ ಏಕಾಏಕಿ ಗೌರಮ್ಮನ ಕನಸು ಬಿದ್ದಿದೆ. ತೀರಾ ಕಡಿಮೆ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುವ ಶೃಂಗಾರ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡು ಬೇಸತ್ತು ಹೋಗಿರುವಂತಿದೆ. ಬಟ್ಟೆ ಅಂದ್ರೆ ಅಲರ್ಜಿ ಎನ್ನುತ್ತಿದ್ದವಳು, ಈಗ ಬಟ್ಟೆ ಬೇಕು ಬಟ್ಟೆ ಎನ್ನುತ್ತಿದ್ದಾಳಂತೆ. ‘ಅಂಥ’ ಸನ್ನಿವೇಶಗಳಿಗೆ ಗುಡ್‌ಬೈ ಹೇಳಲು ಮುಂದಾಗಿದ್ದಾಳಂತೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ಸಂಗತಿಗಳು, ಆಕೆಯ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತೆ ಮಾಡಿವೆ. ‘ನನಗೆ ಮೈ ತುಂಬಾ ಬಟ್ಟೆ ಹಾಕುವ ಲೇಡಿ ಹೀರೋ ಪಾತ್ರಗಳಂದ್ರೆ ತುಂಬಾ ಇಷ್ಟ. ಇನ್ನು ಮುಂದೆ ಕಡಿಮೆ ಬಟ್ಟೆ ತೋಡುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ’ ಎಂದು ತನ್ನ ಇಂಗಿತ ವ್ಯಕ್ತಪಡಿಸಿರುವುದು ಬಾಲಿವುಡ್ ನಿರ್ಮಾಪಕರಿಗೆ ಶಾಕ್ ನೀಡಿದೆ.
ಪ್ರೇಕ್ಷಕರ ಮುಂದೆ ಸನ್ನಿ ಎಂಬ ಕಾಮ ಕನ್ನಿಕೆಯನ್ನು ಕಡಿಮೆ ಬಟ್ಟೆಯಲ್ಲಿ ತೋರಿಸಿ, ಹಣ ಗಳಿಸಬಹುದೆಂಬ ಕೆಲವರ ಲೆಕ್ಕಾಚಾರಕ್ಕೆ ಬ್ರೇಕ್ ಬಿದ್ದಿದೆ. ಒಂದೆಡೆ ಆಕೆಯ ಅಭಿಮಾನಿಗಳು, ಇನ್ನೊಂದೆಡೆ ನಿರ್ಮಾಪಕರು ಇಬ್ಬರಿಗೂ ಸನ್ನಿಯ ಗೌರಮ್ಮನ ಕನಸು ಬೆಚ್ಚಿ ಬೀಳಿಸಿದೆ.
ಕನ್ನಡದಲ್ಲೂ ಜೋಗಿ ಪ್ರೇಮ್ ಜತೆ ‘ಸೇಸಮ್ಮ ಸೇಸಮ್ಮ… ‘ ಎಂದು ಕುಣಿದ ಮೇಲೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಲವ್ ಯು ಆಲಿಯ’ ಚಿತ್ರದಲ್ಲೂ ‘ಕಮಾಕ್ಷಿಯಾಗಿ’ ಹೆಜ್ಜೆ ಹಾಕಿದ್ದಾಳೆ.