ಮನೋರಂಜನೆ

ಬರಲಿದೆ ಶಿವಣ್ಣ -ಪುನೀತ್ ರಾಜ್‌ಕುಮಾರ್ ಅಭಿನಯದ ಹೊಸ ಚಿತ್ರ

Pinterest LinkedIn Tumblr

Shivarajkumar

ಸ್ಟಂಟ್ ಡೈರೆಕ್ಟರ್ ರವಿವರ್ಮಾ ನಿರ್ದೇಶನದಲ್ಲಿ ಮೂಡಿಬರಲಿರುವ ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅಭಿನಯದ ಹೊಸ ಚಿತ್ರವು ನಿರ್ಮಾಪಕರ ಸಮಸ್ಯೆಯಿಂದ ನಿಂತೇ ಹೋಯಿತಾ ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಜಯಣ್ಣ ನಿರ್ಮಾಣ ಮಾಡುವುದು ಖಚಿತವಾಗಿದೆ.

ಸ್ಯಾಂಡಲ್‌ವುಡ್‌ನ ಸ್ಟಾರ್ಸ್‌ ಅಣ್ಣ-ತಮ್ಮ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ಜಯಣ್ಣ ನಿರ್ಮಾಣ ಮಾಡುತ್ತಾರೆ ಎಂದು ಪ್ರಾರಂಭದಿಂದಲೂ ಹೇಳಲಾಗಿತ್ತು. ಆದರೆ, ನಂತರ ನಿರ್ಮಾಣದಿಂದ ಜಯಣ್ಣ ಹಿಂದೆ ಸರಿದಿದ್ದಾರೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಚಿತ್ರ ಸೆಟ್ಟೇರುವುದು ಅನುಮಾನ ಎಂಬ ವದಂತಿಯೂ ಹರಡಿತ್ತು. ಇದೆಲ್ಲದರ ನಡುವೆ ಕಳೆದ ಶನಿವಾರವಷ್ಟೇ ನಿರ್ಮಾಪಕ ಕನಕಪುರ ಶ್ರೀನಿವಾಸ ಈ ಚಿತ್ರವನ್ನು ತಾವು ನಿರ್ಮಾಣ ಮಾಡುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಇದೀಗ ಜಯಣ್ಣ ತಾವೇ ನಿರ್ಮಾಣ ಮಾಡುತ್ತಿರುವುದಾಗಿ ಖಚಿತ ಪಡಿಸಿದ್ದಾರೆ.

‘ನಾವು ಈ ಪ್ರಾಜೆಕ್ಟ್ ಕೈಬಿಟ್ಟಿಲ್ಲ. ಮೊದಲೇ ನಿಶ್ಚಯವಾದಂತೆ ಈ ಚಿತ್ರವನ್ನು ನಾವೇ ನಿರ್ಮಾಣ ಮಾಡಲಿದ್ದೇವೆ. ಕೆಲ ವ್ಯಕ್ತಿಗಳು ತಾವೇ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಅದು ಸುಳ್ಳು’ ಎಂದಿದ್ದಾರೆ ಜಯಣ್ಣ. ಈಗಾಗಲೇ ರವಿವರ್ಮ ಚಿತ್ರದ ಸ್ಕ್ರಿಪ್ಟ್ ಕೆಲಸವನ್ನು ಪ್ರಾರಂಭಿಸಿದ್ದಾರೆ. ಆದಷ್ಟು ಬೇಗ ಇದನ್ನು ಫೈನಲೈಸ್ ಮಾಡುತ್ತೇವೆ ಎಂದೂ ಅವರು ಹೇಳಿದ್ದಾರೆ. ರವಿವರ್ಮ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದು. ಹಿಸ್ಟಾರಿಕ್- ಫ್ಯಾಂಟಸಿ ಸಿನಿಮಾ ಇದು ಎಂದು ರವಿವರ್ಮಾ ತಿಳಿಸಿದ್ದಾರೆ.

Write A Comment