ಮನೋರಂಜನೆ

‘ಭಜರಂಗಿ ಭಾಯಿಜಾನ್’ ಸಿನಿಮಾದ ಹರ್ಷಾಲಿ ಕೂಡ ಈಗ ಸ್ಟಾರ್!

Pinterest LinkedIn Tumblr

salmankhan-harshali

‘ಭಜರಂಗಿ ಭಾಯಿಜಾನ್’ ಪ್ರೇಕ್ಷಕನ ಮನಗೆದ್ದಿದೆ. ಹೀಗೆ ಮನಗೆಲ್ಲುವಲ್ಲಿ ಮೂಕ ಬಾಲಕಿಯಾಗಿ ನಟಿಸಿರುವ ಹರ್ಷಾಲಿ ಮಲ್ಹೋತ್ರಾ ಕಾಣಿಕೆ ದೊಡ್ಡದು. ಬಿಡುಗಡೆ ಮುನ್ನ ‘ಚಿತ್ರದುದ್ದಕ್ಕೂ ನಾನು ಹರ್ಷಾಲಿಯನ್ನು ಹೆಗಲ ಮೇಲೆ ಹೊತ್ತುಕೊಂಡಿರುತ್ತೇನೆ, ವಾಸ್ತವದಲ್ಲಿ ಹರ್ಷಾಲಿ ಇಡೀ ಚಿತ್ರವನ್ನೇ ಹೆಗಲ ಮೇಲೆ ಹೊತ್ತುಕೊಂಡಿದ್ದಾಳೆ’ ಎಂದಿದ್ದರು ನಾಯಕ ಸಲ್ಮಾನ್ ಖಾನ್. ಬಿಡುಗಡೆ ಬಳಿಕ, ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಆಮಿರ್ ಖಾನ್ ಕೂಡ 6 ವರ್ಷ ವಯಸ್ಸಿನ ಈ ಪುಟಾಣಿ ಪ್ರತಿಭಾವಂತೆಯ ಬಗ್ಗೆ ಮೆಚ್ಚುಗೆಯ ಮಳೆಗರೆದಿದ್ದರು. ಇದರರ್ಥ, ಹರ್ಷಾಲಿ ಕೂಡ ಈಗ ಸ್ಟಾರ್!

‘ನನಗೆ ಹಾಡೋದು ಮತ್ತು ನಟಿಸೋದು ಇಷ್ಟ. ಒಟ್ಟಿನಲ್ಲಿ ಸಲ್ಮಾನ್ ಅಂಕಲ್ ತರಹ ನಾನೂ ದೊಡ್ಡ ಸ್ಟಾರ್ ಆಗಬೇಕು’ ಎಂದಿದ್ದಾಳೆ ಹರ್ಷಾಲಿ. ಆಡಿಷನ್​ನಲ್ಲಿ ಸಾವಿರಾರು ಮಕ್ಕಳಲ್ಲಿ ಒಬ್ಬಳಾಗಿ ಭಾಗವಹಿಸಿದ್ದ ಆಕೆಗೆ ‘ಭಜರಂಗಿ…’ ಸಲ್ಲೂ ನಾಯಕತ್ವದ ಚಿತ್ರ ಅನ್ನುವ ಕಲ್ಪನೆ ಇರಲಿಲ್ಲವಂತೆ. ಬಳಿಕ ನಂಬಲಾಗಲಿಲ್ಲ!! ಬಹುಬೇಗ ಚಿತ್ರತಂಡದ ಪ್ರೀತಿಪಾತ್ರಳಾದ ಹರ್ಷಾಲಿ, ಶೂಟಿಂಗ್ ಬಿಡುವಿನಲ್ಲಿ ಸಲ್ಮಾನ್ ಜತೆ ಟೇಬಲ್ ಟೆನಿಸ್ ಆಡುತ್ತಿದ್ದಳಂತೆ. ನಿರ್ದೇಶಕ ಕಬೀರ್ ಖಾನ್ ತೊಡೆ ಮೇಲೆ ಕುಳಿತು ಮೊಬೈಲ್​ನಲ್ಲಿ ಬಾರ್ಬಿ ಆಟಗಳನ್ನು ಕಣ್ತುಂಬಿಕೊಳ್ಳುತ್ತಿದ್ದಳಂತೆ. ಸದಾ ಬಿಜಿಯಾಗಿರುತ್ತಿದ್ದ ಕರೀನಾ ಜತೆ ಮಾತ್ರ ಹರ್ಷಾಲಿಗೆ ಆಟವಾಡುವುದು ಸಾಧ್ಯವಾಗಿಲ್ಲ.

ಚಿಕ್ಕಂದಿನಲ್ಲಿ ಸಿಕ್ಕಿರುವ ಈ ಜನಮನ್ನಣೆ ಹರ್ಷಾಲಿ ಹೆತ್ತವರನ್ನು ಆನಂದದಲ್ಲಿ ತೇಲಿಸಿದೆ. ತಾಯಿ ಕಾಜಲ್ ‘ಮುದ್ದಿನ ಮಗಳು ಬಯಸಿದಂತಾಗಲಿ’ ಎನ್ನುತ್ತಾರೆ. ಆದರೆ, ದ್ವಿತೀಯ ಪಿಯುಸಿವರೆಗೆ ಓದಿನತ್ತ ಗಮನಹರಿಸಬೇಕು ಎಂಬ ಕಾಳಜಿ. ಇಷ್ಟರ ಹೊರತಾಗಿಯೂ ಅವಕಾಶಗಳು ಬಂದರೆ, ದೊಡ್ಡ ಅವಕಾಶಗಳನ್ನಷ್ಟೇ ಸ್ವೀಕರಿಸಬೇಕು ಎಂಬುದು ಅವರ ನಿರ್ಧಾರ.

Write A Comment