ಮನೋರಂಜನೆ

ಸಿಂಹದ ಮರಿ ಜತೆ ಆಟವಾಡಿದ ಈ ಬೆಡಗಿ !

Pinterest LinkedIn Tumblr

974MANASVI_CUB_14ಇತ್ತೀಚೆಗೆ ಈ ನಟಿಮಣಿಯರು ಸುದ್ದಿಯಾಗಲು ಮಾಡುವ ಕಸರತ್ತು ಅಷ್ಟಿಷ್ಟಲ್ಲ. ಇದಕ್ಕೆ ತಾಜಾ ಉದಾಹರಣೆಯೆಂದರೆ ನಟಿ ಹಾಗೂ ಮಾಜಿ ಮಿಸ್ ಇಂಡಿಯಾ ಸುಂದರಿ ಮಾನಸ್ವಿ, ಸಿಂಹದ ಮರಿ ಜತೆ ಆಟವಾಡುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು. ರಜೆಯ ಮಜಾ ಅನುಭವಿಸುವ ಸಲುವಾಗಿ ದುಬೈಗೆ ಹಾರಿದ್ದ ಮಾನಸ್ವಿ ಸ್ನೇಹಿತೆಯೊಬ್ಬಳ ಮನೆಗೆ ತೆರಳಿದ್ದರು. ಅವರ ಸ್ನೇಹಿತೆ ಒಂದು ಸಿಂಹದ ಮರಿಯನ್ನು ದತ್ತು ತೆಗೆದುಕೊಂಡಿದ್ದು ಇದನ್ನು ಕಂಡ ಮಾನಸ್ವಿ ಆ ಸಿಂಹದ ಮರಿ ಜತೆ ಆಟವಾಡಿದರಂತೆ.

ದುಬೈನಲ್ಲಿ ಮಾತ್ರ ಇಂತಹ ಅವಕಾಶ ಸಿಗುವುದು ಎಂದಿರುವ ಮಾನಸ್ವಿ, ಸಿಂಹದ ಮರಿ ಬಿಜ್ಲಿಯೊಂದಿಗೆ ಫೋಟೋ ಕೂಡ ತೆಗೆದುಕೊಂಡು ಸಾಮಾಜಿಕ ಜಾಲ ತಾಣವೊಂದರಲ್ಲಿ ಅಪ್‌ಲೋಡ್ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ.

Write A Comment