ಮನೋರಂಜನೆ

ಅಮಿರ್ ಖಾನ್ ನ ಪೀಕೆ ಸಿನಿಮಾದ ದಾಖಲೆ ಅಳಿಸಿ ಹಾಕಿದ ಬಾಹುಬಲಿ; 2ನೇ ದಿನವೇ 100 ಕೋಟಿ ಕ್ಲಬ್ ಸೇರಿದ ಭಾರತೀಯ ಚಿತ್ರ

Pinterest LinkedIn Tumblr

bahu

ಹೈದರಾಬಾದ್: ಬಾಹುಬಲಿಯ ಅಬ್ಬರಕ್ಕೆ ಬಾಕ್ಸಾಫೀಸಿನ ಎಲ್ಲ ದಾಖಲೆಗಳು ಧೂಳಿಪಟ. ವಿದೇಶದಲ್ಲಿ ಬಾಹುಬಲಿಯ ತೆಲುಗು ಆವತರಣಿಕೆ ಅಭೂತಪೂರ್ವ ಓಪನಿಂಗ್ ಪಡೆದಿದ್ದು, ಅಮೆರಿಕದಲ್ಲಿ ಈವರೆಗೂ ಅಮಿರ್ ಖಾನ್ ರ ಪೀಕೆ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದೆ. ಮೊದಲದಿನ ರು.6ಕೋಟಿ ಗಳಿಸಿದ್ದ ಪೀಕೆಯನ್ನು ಮೀರಿಸಿರುವ ಬಾಹುಹಲಿ ಒಂದೇ ದಿನ ರು.8.15ಕೋಟಿ ಬಾಚಿಕೊಂಡಿದೆ.

ಇದು ವಿದೇಶದ ದಾಖಲೆಯಾಗಿದ್ದು, ಭಾರತದಲ್ಲೂ ಸಹ ಎಲ್ಲ ರೆಕಾರ್ಡ್ ಪುಡಿಗಟ್ಟಿದೆ. ಮೊದಲ ದಿನ ರು.44.37ಕೋಟಿ ಗಳಿಸಿದ್ದ ಬಾಲಿವುಡ್ ನ ಹ್ಯಾಪಿ ನ್ಯೂಇಯರ್ ಚಿತ್ರ ಇದೀಗ ಬಾಹುಬಲಿಯಿಂದ 2 ನೇ ಸ್ಥಾನಕ್ಕೆ ಇಳಿದಿದೆ. ಬಾಹುಬಲಿಯ ಮೊದಲ ದಿನದ ಕಲೆಕ್ಷನ್ ರು.50 ಕೋಟಿಯಾಗಿದ್ದು, ವಿಶ್ವದಾದ್ಯಂತ ಗಳಿಕೆ ರು.66 ಕೋಟಿ. ಎರಡನೇ ದಿನದಂತ್ಯಕ್ಕೆ ವಿಶ್ವದ್ಯಂತ ಒಟ್ಟು ಗಳಿಕೆ ರು.140 ಕೋಟಿ ದಾಟಿದೆ ಎಂದು ವರದಿಗಳು ಹೇಳುತ್ತಿವೆ. ಇದರಿಂದಾಗಿ ಬಾಹುಬಲಿ ಅತಿ ವೇಗದಲ್ಲಿಯೇ 100 ಕೋಟಿ ಕ್ಲಬ್ ಸೇರಿದ ಭಾರತೀಯ ಚಿತ್ರ ಎಂಬ ದಾಖಲೆ ನಿರ್ಮಿಸಿದೆ.

Write A Comment