ಮನೋರಂಜನೆ

ಥಾಮಸ್ ಮ್ಯೂಸಿಕ್ ಲೋಕ

Pinterest LinkedIn Tumblr

27* ಶೀಲಾ ಸಿ. ಶೆಟ್ಟಿ
ಚಿಕ್ಕ ವಯಸ್ಸಿಗೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟವರು. 16 ನೇ ವಯಸ್ಸಿಗೆ ಸೌತ್ ಇಂಡಿಯನ್ ಸಿನಿಮಾದಲ್ಲಿ ಹೆಸರು ಮಾಡಿದ ಎಂ. ಎಸ್ ವಿಶ್ವನಾಥನ್ ಗ್ರೂಪ್‌ನಲ್ಲಿ ಟ್ರಪೆಂಟ್ ನುಡಿಸಿದವರು. ಬಹುತೇಕ ಮ್ಯೂಸಿಕ್ ಡೈರೆಕ್ಟರ್ಸ್‌ ಜತೆ ಕೆಲಸ ಮಾಡಿದ ಅನುಭವ. ಲಕ್ಷ್ಮಿಕಾಂತ್ ಪ್ಯಾರೆಲಾಲ್ ಹಾಗೂ ಆರ್. ಡಿ ಬರ್ಮನ್ ಜತೆಗೂ ಕೆಲಸ ಮಾಡಿದ ಹೆಗ್ಗಳಿಕೆ. ಇದಕ್ಕಿಂತ ಇನ್ನೇನು ಬೇಕು ಎನ್ನುತ್ತಾರೆ ಈಗಾಗಲೇ ಸೌತ್ ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ಸಾಕ್ಸ್ ಪ್ಲೇಯರ್ ಜೀವನ್ ಥಾಮಸ್ ಕ್ಸೇವಿಯರ್.

ತಂದೆಯಿಂದ ಬಳುವಳಿಯಾಗಿ ಬಂದ ಸಂಗೀತ ಲೋಕದ ಆಸಕ್ತಿ ಹಾಗೂ ಟ್ರಂಫೆಟ್ ನುಡಿಸುವ ಚಾಕಚಕ್ಯತೆ ಇಳಯರಾಜ ಹಾಗೂ ರೆಹಮಾನ್‌ಜತೆಗೂ ಕಾರ್ಯ ನಿರ್ವಹಿಸಲು ಕಾರಣವಾಗಿತ್ತು. ಲೆಜೆಂಡರಿ ಮ್ಯೂಸಿಕ್ ಡೈರೆಕ್ಟರ್ ಎಂದೇ ಖ್ಯಾತಿ ಗಳಿಸಿದ್ದ ವಿಶ್ವನಾಥನ್ ಅಲಿಯಾಸ್ ಮೆಲ್ಲಿಸಾಯಿ ಮನ್ನಾರ್‌ರೊಂದಿಗಿನ ಉತ್ತಮ ಬಾಂಧವ್ಯ ಜೀವನ್ ಅವರ ದಿಕ್ಕು ಬದಲಿಸಿತ್ತಂತೆ. ರೋಜಾ ಚಿತ್ರದಿಂದ ರೋಬೊಟ್‌ವರೆಗಿನ ರೆಹಮಾನ್ ಜತೆಗಿನ ಪ್ರತಿ ಚಿತ್ರದಲ್ಲೂ ಇವರ ಮ್ಯೂಸಿಕ್‌ಗೆ ಸ್ಥಾನವಿತ್ತು. 80 ರ ದಶಕದ ಟ್ರಂಫೆಟ್ ಪ್ಲೇಯರ್‌ನ ಹಿಟ್ ಲಿಸ್ಟ್‌ನಲ್ಲಿದ್ದ ಫ್ರಾಂಕ್ ಡುಬಿಯರ್ ಜತೆಗೂ ಮ್ಯೂಸಿಕ್ ಕಾನ್ಸೆರ್ಟ್ ನೀಡಿದ್ದು, ತಮಿಳು ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ, ದೇಶ-ವಿದೇಶಗಳಲ್ಲೂ ತಮ್ಮ ಕಾರ್ಯಕ್ರಮ ನೀಡುತ್ತಾ ಸದಾ ಬ್ಯುಸಿಯಾಗಿದ್ದಾರೆ.

ಜಾಝ್ ಬ್ಯಾಂಡ್
ಸಿನಿಮಾ ಜಗತ್ತನ್ನು ಹೊರತುಪಡಿಸಿಯೂ ಜೀವನ್ ಥಾಮಸ್, ಜಾಝ್ ಮ್ಯೂಸಿಕ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇಕೆ! ಪಂಡಿತ್ ರವಿಶಂಕರ್ ಅವರೊಂದಿಗೆ ಮ್ಯೂಸಿಕ್ ಸಮಾಗಮ ಕಾರ್ಯಕ್ರಮದಲ್ಲಿ ಪರ್ಫಮೆನ್ಸ್ ನೀಡಿದ್ದ ಬಗ್ಗೆ ಹೆಮ್ಮೆ ಇದೆ. ಹಿರಿತೆರೆಯಲ್ಲಿ ಮಾತ್ರವಲ್ಲ, ಸಾಕಷ್ಟು ಕಿರುತೆರೆ ಮ್ಯೂಸಿಕ್ ಪ್ರೊಗ್ರಾಂಗಳಲ್ಲೂ ತಮ್ಮ ಮ್ಯೂಸಿಕ್ ಜಾದೂ ತೋರಿಸಿದ್ದಾರೆ.

ಲವಲವಿಕೆಯೊಂದಿಗೆ ಲಿಟಲ್ ಚಾಟ್ ಮಾಡಿದ ಜೀವನ್ ಥಾಮಸ್‌ಗೆ ಹಾಲಿವುಡ್‌ನಲ್ಲೂ ಕೆಲಸ ಮಾಡುವಾಸೆ.

* ಮ್ಯೂಸಿಕ್‌ಲೋಕದಲ್ಲಿ ಈಗಾಗಲೇ ಸಾಕಷ್ಟು ಕಾರ್ಯ ನಿರ್ವಹಿಸಿರುವ ನಿಮ್ಮ ಮುಂದಿನ ಗುರಿಯೇನು?
ತಮ್ಮ ಸೋಲೋ ಇನ್ಸ್‌ಸ್ಟ್ರುಮೆಂಟಲ್ ಆಲ್ಬಂ ತರುವ ಯೋಚನೆ ಇದೆ.

* ರಾಗ ಸಮಾಗಮ ಕಾರ್ಯಕ್ರಮದ ಬಗ್ಗೆ ಹೇಳ್ತೀರಾ?
ರಾಗಸಮಾಗಮ ಹೆಸರಲ್ಲಿ ವಿದೇಶದಲ್ಲಿ ಕಾರ್ಯಕ್ರಮ ನೀಡುತ್ತಿದ್ದು, ಮ್ಯೂಸಿಕಲ್ ಇನ್‌ಸ್ಟ್ರುಮೆಂಟ್‌ಗಳ ಕಾರ್ಯಕ್ರಮ ನೀಡುವ ಬಗ್ಗೆ ಖುಷಿಯಿದೆ. ಮತ್ತಷ್ಟು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ.

* ಮ್ಯೂಸಿಕ್ ಮಂತ್ರ?
ಮ್ಯೂಸಿಕ್ ಅನ್ನು ಲೈವ್ ಆಗಿ ಇಡುವುದು. ಸದಾ ಮ್ಯೂಸಿಕ್ ಪ್ರೀತಿಸುವುದು.

* ಮುಂದಿನ ಗುರಿ?
ಮಕ್ಕಳಿಗೆ ನಾನಾ ಬಗೆಯ ದೇಶ-ವಿದೇಶದ ಮ್ಯೂಸಿಕ್ ಇನ್‌ಸ್ಟ್ರುಮೆಂಟ್ಸ್ ಕಲಿಸುವ ಶಾಲೆ ತೆರೆಯುವ ಗುರಿಯಿದೆ.

* ಮ್ಯೂಸಿಕ್ ಕ್ಷೇತ್ರದಲ್ಲಿ ಮತ್ತಷ್ಟು ಸಾಧಿಸುವ ಇರಾದೆ ಇದೆಯಾ?
ಯಾಕಿಲ್ಲ! ಸದಾ ಇದ್ದೇ ಇರುತ್ತದೆ. ಸೌತ್ ಇಂಡಿಯಾದಲ್ಲಿ ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದು, ಹಾಲಿವುಡ್‌ನಲ್ಲಿ ಮ್ಯೂಸಿಕ್ ಕಂಪೋಸ್ ಮಾಡುವ ಮನಸ್ಸಿದೆ. ಅವಕಾಶಕ್ಕಾಗಿ ಕಾಯುತ್ತಿರುವೆ.

* ಕನ್ನಡ ಸಿನಿಮಾಗಳಲ್ಲಿ ವರ್ಕ್ ಮಾಡಿದ್ದೀರಾ?
ಹೌದು, ಹಳೆಯ ಚಿತ್ರಗಳಾದ ಕೃಷ್ಣ ನೀ ಕುಣಿದಾಗ, ಇನ್‌ಸ್ಪೆಕ್ಟರ್ ವಿಕ್ರಂ, ಧನುಷ್, ಇದು ಸತ್ಯ ಚಿತ್ರಗಳಲ್ಲಿ ಇನ್‌ಸ್ಟ್ರುಮೆಂಟ್‌ನ ಜಾದೂ ತೋರಿಸಿರುವೆ. ಮಂಜುಳಾ ಗುರುರಾಜ್ ಅವರೊಂದಿಗೆ ಒಂದಿಷ್ಟು ಕಾರ್ಯಕ್ರಮಗಳನ್ನು ನೀಡಿದ್ದೇನೆ.

Write A Comment