ಮನೋರಂಜನೆ

ಜೈಲಿನಲ್ಲಿರುವ ಸಂಜಯ್ ದತ್ತ್ ಗಾಗಿ ಕಾಯುತ್ತಿದೆ ಮುನ್ನಾಭಾಯ್ ಎಂಬಿಬಿಎಸ್‍ನ ಪಾರ್ಟ್ – 3

Pinterest LinkedIn Tumblr

munnabhai

ಚಿತ್ರದಲ್ಲಿ ಸಂಜಯ್ ದತ್ ಬಂಟನ ಪಾತ್ರ ನಿರ್ವಹಿಸಿದ್ದ ನಟ ಅರ್ಶದ್ ವಾರ್ಸಿ, ಮುನ್ನಾಭಾಯ್ ಎಂಬಿಬಿಎಸ್ ಮೂರನೇ ಭಾಗದ ಕುರಿತು ಮಾತನಾಡಿದ್ದಾರೆ. ಜೈಲಿನಲ್ಲಿರುವ ಸಂಜಯ್ ದತ್ ಹೊರಬಂದ ಬಳಿಕ ಚಿತ್ರ ಸೆಟ್ಟೆರಲಿದೆ ಎಂದು ತಿಳಿಸಿದ್ದಾರೆ.

1993ರ ಮುಂಬೈ ಬಾಂಬ್ ಬ್ಲಾಸ್ಟ್ ಮತ್ತು ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ ಆರೊಪದಡಿ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಜಯ್ ದತ್ ಜೈಲಿನಿಂದ ಬಿಡುಗಡೆಯಾದ ಬಳಿಕ ಮುನ್ನಾಭಾಯ್ ಎಂಬಿಬಿಎಸ್ ಮೂರನೇ ಭಾಗ ಸೆಟ್ಟೇರುವುದರಲ್ಲಿ ಯಾವುದೇ ಅನುಮಾನ ಬೇಡ. ಸ್ಕ್ರಿಪ್ಟ್ ಕೂಡ ರೆಡಿಯಾಗಿದ್ದು, ಸಂಜಯ್ ದತ್ತ್ ಜೈಲಿನಿಂದ ಹೊರಬಂದು ಸ್ವಲ್ಪ ಸುಧಾರಿಸಿಕೊಳ್ಳಲಿ. ನಂತರ ಚಿತ್ರೀಕರಣ ಆರಂಭ ಮಾಡಲು ನಿರ್ಮಾಪಕರು ರೆಡಿಯಾಗಿದ್ದಾರೆ ಎಂದು ನಟ ಅರ್ಶದ್ ವಾರ್ಸಿ ಹೇಳಿದ್ದಾರೆ.

2003ರಲ್ಲಿ ತೆರೆಕಂಡ ಮುನ್ನಾ ಭಾಯ್ ಎಂಬಿಬಿಎಸ್, 707 ಮಿಲಿಯನ್ ಕಲೆಕ್ಷನ್ ಮಾಡಿತ್ತು. ನಂತರ ಈ ಸಿನಿಮಾ ತೆಲುಗು, ತಮಿಳು ಮತ್ತು ಕನ್ನಡದಲ್ಲೂ ರಿಮೇಕ್ ಆಗಿ ಯಶಸ್ಸುಗಳಿಸಿತ್ತು. ನಂತರ 2006ರಲ್ಲಿ ‘ಲಗೇ ರಹೋ ಮುನ್ನಾ ಭಾಯ್’ ಶೀರ್ಷಿಕೆಯಲ್ಲಿ ಬಂದ ಈ ಚಿತ್ರದ ಮುಂದುವರಿದ ಭಾಗವಾಗಿ ಮುನ್ನಾ ಭಾಯ್ ಎಂಬಿಬಿಎಸ್-3 ಮೂಲಕ ಕಾಮಿಡಿ ಕಚಗುಳಿ ಇಡಲು ಚಿತ್ರತಂಡ ಸದ್ಧವಾಗಿದೆ.

Write A Comment