ಮನೋರಂಜನೆ

ಜುರಾಸಿಕ್ ವರ್ಲ್ಡ್ ವೇಗಕ್ಕೆ ದಾಖಲೆಗಳೆಲ್ಲ ಧೂಳಿಪಟ: ವಾರಾಂತ್ಯ ಗಳಿಕೆಯಲ್ಲಿ ಜುರಾಸಿಕ್‌ ವರ್ಲ್ಡ್ ಗಳಿಕೆ 3276 ಕೋಟಿ!

Pinterest LinkedIn Tumblr

Jurassic-World

ಲಾಸ್‌ ಏಂಜಲೀಸ್‌: ಜುರಾಸಿಕ್ ಪಾರ್ಕ್ ಸರಣಿಯ ಚಿತ್ರಗಳು ದಾಖಲೆ ಕಲೆಕ್ಷನ್ ಮಾಡಿರುವುದು ತಿಳಿದಿರುವ ಸಂಗತಿ. ಇದೇ ಸರಣಿಯಲ್ಲಿ ಬಂದ ಜುರಾಸಿಕ್‌ ವಲ್ಡ್‌ ಚಿತ್ರ ಜಗತ್ತಿನೆಲ್ಲೆಡೆ ಬಿಡುಗಡೆಯಾದ ಒಂದು ವಾರದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಯ 3276 ಕೋಟಿ ರು. ಕೊಳ್ಳೆ ಹೊಡೆದಿದೆ.

ಕಾಲಿನ್ ಟ್ರೆವೆರೋ ನಿರ್ದೇಶನದ ಈ ಚಿತ್ರ ಮೊದಲ ವಾರಾಂತ್ಯದಲ್ಲಿ ವಿಶ್ವಾದ್ಯಂತ 511.8 ದಶಲಕ್ಷ ಡಾಲರ್ ಬಾಚಿಕೊಂಡಿದೆ. ಚಿತ್ರವೊಂದು ಇಷ್ಟೊಂದು ಅಧಿಕ ಹಣ ಗಳಿಸಿರುವುದು ಕೂಡ ಇದೇ ಮೊದಲು. 2011ರಲ್ಲಿ ಹ್ಯಾರಿ ಪಾಟರ್‌ ಮತ್ತು ಡೆತ್ಲಿ ಹ್ಯಾಲೋಸ್‌ ಚಿತ್ರ ಮೊದಲ ವಾರದಲ್ಲಿ 3072 ಕೋಟಿ ರು.  ಗಳಿಸಿತ್ತು. ಈ ದಾಖಲೆಯನ್ನು ಜುರಾಸಿಕ್‌ ವರ್ಲ್ಡ್ ಹಿಂದಿಕ್ಕಿದೆ.

ಕಾಲಿನ್ ಟ್ರೆವೆರೋ ನಿರ್ದೇಶನದ ಈ ಚಿತ್ರ ಮೊದಲ ವಾರಾಂತ್ಯದಲ್ಲಿ ವಿಶ್ವಾದ್ಯಂತ 511.8 ದಶಲಕ್ಷ ಡಾಲರ್ ಬಾಚಿಕೊಂಡಿದೆ. ಈ ಚಿತ್ರ 961 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು.

ಭಾರತದಲ್ಲೂ ಶನಿವಾರ ಜುರಾಸಿಕ್‌ ವರ್ಲ್ಡ್ ಚಿತ್ರ ಬಿಡುಗಡೆಯಾಗಿದ್ದು, ಎರಡೇ ದಿನದಲ್ಲಿ 44 ಕೋಟಿ ರು. ಬಾಚಿಕೊಂಡಿದೆ. ಈ ಚಿತ್ರದಲ್ಲಿ ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ಅವರು, ಪಾರ್ಕ್‌ನ ಮಾಲೀಕ ಸಾಮ್‌ ಮಸ್ರಾನಿ ಅವರ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಹಾಲಿವುಡ್ ನಲ್ಲಿ ಮೊದಲ ವಾರಾಂತ್ಯದಲ್ಲಿ ಯಾವೊಂದು ಚಿತ್ರವೂ 500 ದಶಲಕ್ಷ ಡಾಲರ್ ಗಳಿಕೆಯ ಗಡಿ ಮುಟ್ಟಿರಲಿಲ್ಲ. ಆದರೆ ‘ಜುರಾಸಿಕ್ ವರ್ಲ್ಡ್’ ಈ ಖ್ಯಾತಿಗೆ ಪಾತ್ರವಾಗಿದೆ. ಟಾಪ್ 5 ಬ್ಲಾಕ್​ಬಸ್ಟರ್ ಚಿತ್ರಗಳಲ್ಲಿ ಮುಂಚೂಣಿಯಲ್ಲಿ ಜುರಾಸಿಕ್ ವರ್ಲ್ಡ್, ಹ್ಯಾರಿ ಪಾಟರ್ ಆಂಡ್ ದಿ ಡೆತ್​ಲಿ ಹಾಲೊಸ್ (483.2 ದಶಲಕ್ಷ ಡಾಲರ್), ಫ್ಯೂರಿಯಸ್ 7 (397.6 ದ.ಲ.ಡಾ.), ಹ್ಯಾರಿ ಪಾಟರ್ ಆಂಡ್ ಹಾಫ್-ಬ್ಲಡ್ ಪ್ರಿನ್ಸ್ (394 ದ.ಲ.ಡಾ.), ದ ಅವೆಂಜರ್ಸ್ (392.5 ದ.ಲ.ಡಾ.) ನಂತರದ ಸ್ಥಾನದಲ್ಲಿವೆ.

Write A Comment