ಮನೋರಂಜನೆ

ಟೈಮ್ ಪಾಸ್ ಲವ್ವಲ್ಲಿ ನಂಬಿಕೆ ಹೆಚ್ಚು: ಕಂಗನಾ

Pinterest LinkedIn Tumblr

kan

ಕಂಗನಾ ರನೌತ್ ಅಭಿನಯದ ಕಟ್ಟಿ ಬಟ್ಟಿ ಚಿತ್ರದ ಟ್ರೈಲರ್ ಈಗಾಗಲೇ  ಬಿಡುಗಡೆಯಾಗಿದೆ. ಟ್ರೈಲರ್ ನೋಡಿದ ಪ್ರೇಕ್ಷರಂತೂ ಈ ಚಿತ್ರದಲ್ಲೂ ಕಂಗನಾ ಹಿಂದಿನ ಚಿತ್ರಗಳಂತೆ ಇದರಲ್ಲೂ ಆಕೆಯನ್ನು ವಿಭಿನ್ನವಾಗಿ ನೋಡಬಹುದು ಎನ್ನುತ್ತಿದ್ದಾರೆ. ಇನ್ನು ಟ್ರೈಲರ್ ನಲ್ಲಿ ಕಂಗನಾ ನೋಡಿದಾಗಲೂ ಹಾಗೇ ಅನಿಸುತ್ತದೆ. ಒಂದು ವೇಳೆ ಟ್ರೈಲರ್ ನಲ್ಲಿದ್ದಂತೆ ಕಂಗನಾ ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ರೆ ಚಿತ್ರ ಹಿಟ್ ಆಗೋದರಲ್ಲಿ ಸಂಶಯವಿಲ್ಲ.
ಅಂದ್ಹಾಗೆ ಕಟ್ಟಿ ಬಟ್ಟಿ ಚಿತ್ರ ಲೀವಿಂಗ್ ಟುಗೆದರ್ ರಿಲೇಷನ್ ಆಧಾರಿತ ಚಿತ್ರವಾಗಿದೆ. ಕಾಲೇಜು ದಿನಗಳಿಂದ 5 ವರ್ಷಗಳ ಕಾಲ ಲೀವಿಂಗ್ ರಿಲೇಷನ್ ನಲ್ಲಿರುವ ಜೋಡಿಯೊಂದು ಪ್ರಬುದ್ದವಾದ ಬಳಿಕ ಹೇಗಿರುತ್ತೆ ಅನ್ನೋದೇ ಚಿತ್ರ ಕಥಾ ವಸ್ತು. ಇನ್ನು ಚಿತ್ರದಲ್ಲಿ ಟೈಮ್ ಪಾಸ್ ಗಾಗಿ ಲವ್ ಮಾಡುವ ಹುಡುಗಿಯಾಗಿ ಕಂಗನಾ ಕಾಣಿಸಿಕೊಂಡಿದ್ದಾಳೆ. ಈ ಬಗ್ಗೆ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಂಗನಾ ನನಗೆ ನಿಜ ಜೀವನದಲ್ಲೂ ಟೈಮ್ ಪಾಸ್ ಲವ್ ನಲ್ಲಿ ನಂಬಿಕೆ ಜಾಸ್ತಿ ಎಂದಿದ್ದಾಳೆ.

ಇನ್ನು ಚಿತ್ರದಲ್ಲಿ ಕಂಗನಾಗೆ ಜೋಡಿಯಾಗಿ ಇಮ್ರಾನ್ ಖಾನ್ ಕಾಣಿಸಿಕೊಂಡಿದ್ದು, ಕಂಗನಾ ಆತನನ್ನು ಹಾಡಿ ಹೊಗಳಿದ್ದಾನೆ. ಇಮ್ರಾನ್  ನಾನು ಮೊದಲ ಬಾರಿಗೆ ನಟಿಸುತ್ತಿದ್ದರೂ ಆತ ನನಗೆ ಉತ್ತಮವಾಗಿ ಸಹಕರಿಸಿದ್ದಾನೆ. ಆತ ತುಂಬಾ ಕೂಲ್ ಹಾಗೂ ಉತ್ತಮ ವ್ಯಕ್ತಿ ಎಂದು ಗುಣಗಾನ ಮಾಡಿದ್ದಾಳೆ. ಈಗಾಗಲೇ ಟ್ರೈಲರ್ ಮೂಲಕ ಪ್ರೇಕ್ಷಕರಿಗೆ ಮಜಾ ನೀಡಿರುವ ಕಟ್ಟಿ ಬಟ್ಟಿ ಟೀಮ್ ಬಿಡುಗಡೆಯಾದ ಬಳಿಕ ಇನ್ನಷ್ಟು ಮನರಂಜನೆ ನೀಡೋದರಲ್ಲಿ ಎರಡು ಮಾತಿಲ್ಲ.

Write A Comment