ಮನೋರಂಜನೆ

ಸಲ್ಮಾನ್ ಖಾನ್ ನ ‘ಸುಲ್ತಾನ್’ಗೆ ರಾಣಿಯಾಗುವವರ ಕುರಿತು ಹುಡುಕಾಟ !

Pinterest LinkedIn Tumblr

39858-salman-khan-in-the-movie-veer.jpg

ಮುಂಬೈ: ಯಶ್ ರಾಜ್ ಫಿಲಂನ ಮುಂದಿನ ಚಿತ್ರ ‘ಸುಲ್ತಾನ್’ ದಿನದಿಂದ ದಿನಕ್ಕೆ ಒಂದಲ್ಲ ಒಂದು ಸುದ್ದಿ ಮಾಡುತ್ತಲೇ ಇದೆ. ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಅಭಿನಯಿಸಲಿದ್ದು, ಸಲ್ಲು ಜೊತೆ ಸ್ಕ್ರೀನ್ ಶೇರ್ ಮಾಡುವ ನಟಿ ಯಾರು ಎನ್ನುವ ಚರ್ಚೆಗಳ ಮಧ್ಯೆ ನಟಿ ಪರಿಣಿತಿ ಚೋಪ್ರ ಹೆಸರು ಕೂಡ ಕೇಳಿ ಬಂದಿದೆ.

ಆದರೆ ಸಲ್ಲು ಜೊತೆ ನಟಿಸಲು ಪರಿಣಿತಿ ಚೋಪ್ರಗೆ ಯಾವುದೇ ಕರೆ ಬಂದಿಲ್ಲವೆಂದು ಪರಿಣಿತಿ ವಕ್ತಾರರು ತಿಳಿಸಿದ್ದಾರೆ. ಸಲ್ಮಾನ್ ಖಾನ್‍ರ ದೊಡ್ಡ ಅಭಿಮಾನಿಯಾಗಿರುವ ಪರಿಣಿತಿಗೆ ಮುಂಬರುವ ದಿನಗಳಲ್ಲಿ ಸಲ್ಲು ಜೊತೆ ನಟಿಸಬೇಕೆಂಬ ಆಸೆ ಇದೆಯಂತೆ. ಆ ಗೊಲ್ಡನ್ ಅವಕಾಶಕ್ಕಾಗಿ ಪರಿಣಿತಿ ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸುಲ್ತಾನ್ ಚಿತ್ರದಲ್ಲಿ ನಟಿಸುತ್ತಾರೆ ಎಂದು ದೀಪಿಕಾ ಪಡುಕೋಣ್ ಮತ್ತು ಕಂಗನಾ ಹೆಸರು ಕೇಳಿಬಂದಿತ್ತು. ಆ ಸಾಲಿನಲ್ಲಿ ಇದೀಗ ಪರಿಣಿತಿ ಕೂಡ ಸೇರ್ಪಡೆಯಾಗಿದ್ದು, ಯಾರು ಸಲ್ಲು ಜೊತೆ ರೊಮ್ಯಾನ್ಸ್ ಮಾಡುತ್ತಾರೋ ಕಾದುನೋಡಬೇಕು.

ಯಶ್ ರಾಜ್ ಬ್ಯಾನರ್‍ನಲ್ಲಿ ‘ಸುಲ್ತಾನ್’ ಸಲ್ಲುಗೆ ಎರಡನೇ ಚಿತ್ರ. ಈ ಮುಂಚೆ ‘ಏಕ್ ಥಾ ಟೈಗರ್’ ನಂತಹ ಬ್ಲಾಕ್‍ಬಾಸ್ಟರ್ ಹಿಟ್ ನೀಡಿದ್ದ ಯಶ್ ರಾಜ್ ಫಿಲಂ ಜೊತೆ ಮತ್ತೊಮ್ಮೆ ಸಲ್ಲು ಕೈ ಜೋಡಿಸುತ್ತಿದ್ದು, ಸದ್ಯ ‘ಭಜರಂಗಿ ಭಾಯ್‍ಜಾನ್’ ಮತ್ತು ‘ಪ್ರೇಮ್ ರತನ್ ಧನ್ ಪಾಯೋ’ ಪ್ರಮೋಷನ್‍ನಲ್ಲಿ ತೊಡಗಿಕೊಂಡಿದ್ದಾರೆ.

Write A Comment