ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಅಮೀರ್ ಖಾನ್ ಅವರ ಪಿಕೆ ಚಿತ್ರ ಇನ್ನೂ ಸಹ ಸದ್ದು ಮಾಡುತ್ತಿದ್ದು ದಾಖಲೆಯ ಹಣ ಗಳಿಕೆ ಮಾಡಿದೆ.
ಹಿಂದುಗಳ ಭಾವನೆಗೆ ಧಕ್ಕೆ ತರುವ ಚಿತ್ರವೆಂದು ವಿವಾದ ಸೃಷ್ಟಿಸಿದ್ದ ಈ ಚಿತ್ರ ಭಾರತ ಸೇರಿದಂತೆ ಚೀನಾದಲ್ಲಿಯೂ ತನ್ನ ಅದ್ಬುತ ಪ್ರದರ್ಶನ ಕಂಡಿದ್ದು ಚೀನಾವೊಂದರಲ್ಲೆ 100 ಕೋಟಿಗೂ ರೂ. ಅಧಿಕ ಕಲೆಕ್ಷನ್ ಮಾಡಿರುವ ಜತೆಗೆ ಈ ಚಿತ್ರದ ಬಗೆಗೆ ಚೀನಾದಲ್ಲಿಯೂ ಚರ್ಚೆ ಆರಂಭವಾಗಿದೆ.
ಅಲ್ಲದೇ ಹಲವಾರು ಟೀಕೆ ಮತ್ತು ಪ್ರತಿಭಟನೆಗಳ ನಡುವೆ 2014ರಲ್ಲಿ ತೆರೆಕಂಡ ಅಮೀರ್ ಅನುಷ್ಕಾ ಶರ್ಮಾ ಜೋಡಿಯ ‘ಪಿಕೆ’ ವಿಡಂಬನ ಹಾಸ್ಯ ಚಿತ್ರವಾಗಿದ್ದು,ಈಗಾಗಲೇ 700 ಕೋಟಿ ಆದಾಯ ಗಳಿಸಿ ಭಾರೀ ಹಣ ಗಳಿಸಿದ ಭಾರತೀಯ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಶೇಷವೆಂದರೆ 2013ರಲ್ಲಿ ತೆರೆಕಂಡಿದ್ದ ಅಮೀರ್ ಅಭಿನಯದ ಧೂಮ್-3 ಚಿತ್ರ 540 ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ‘ಪಿಕೆ’ 700 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ತನ್ನ ರೆಕಾರ್ಡ್ ತಾನೇ ಮುರಿದಿರುವ ಈ ಚಿತ್ರ ಅಮೀರ್ ಖಾನ್ ಅವರ ಅಭಿನಯಕ್ಕೆ ಸಿಕ್ಕ ಪ್ರತಿಫಲ ಎಂಬುದಂತೂ ಸತ್ಯ.
